ದಾವಣಗೆರೆ, ಜೂ. 1- ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿ ಕಳೆದ ವಾರ ಜರುಗಿದ 45ನೇ ರಾಷ್ಟ್ರೀಯ ಆರ್ಮ್ ರೆಜಲಿಂಗ್ (ಪಂಜ ಕುಸ್ತಿ) ಸ್ಪರ್ಧೆಯಲ್ಲಿ ಹರಿಹರ ಬ್ರದರ್ ಜಿಮ್ನ ಕ್ರೀಡಾಪಟುಗಳು 4 ಚಿನ್ನದ ಪದಕ, 7 ಬೆಳ್ಳಿಯ ಪದಕ, 5 ಕಂಚಿನ ಪದಕ ಸೇರಿದಂತೆ, ಒಟ್ಟು 16 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಸ್ಪರ್ಧೆಗಳಲ್ಲಿ 21 ರಾಜ್ಯಗಳಿಂದ ಸುಮಾರು 850 ಜನ ಸ್ಪರ್ಧಾಳು ಗಳು ಭಾಗವಹಿಸಿದ್ದು, ಹರಿಹರದ ಬ್ರದರ್ ಜಿಮ್ನ 30 ಕ್ರೀಡಾಪಟುಗಳು ರಾಜ್ಯವನ್ನು ಪ್ರತಿನಿಧಿಸಿದ್ದರು. ಇವರಲ್ಲಿ 4 ಜನ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಆರ್ಮ್ ರೆಜಲಿಂಗ್ (ಪಂಜ ಕುಸ್ತಿ) ಸ್ಪರ್ಧೆಗಳಿಗೆ ಆಯ್ಕೆಯಾ ಗಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಹರಿಹರ ಬ್ರದರ್ ಜಿಮ್ನ ಸಂಚಾಲಕ ಅಕ್ರಂ ಬಾಷಾ, ತರಬೇತುದಾರ ಮೊಹಮ್ಮದ್ ರಫೀಕ್ ಅಭಿನಂದಿಸಿದ್ದಾರೆ.
December 29, 2024