ಮಲೇಬೆನ್ನೂರು, ಮೇ 26- ಈಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಂಬಳೂರು ಗ್ರಾಮದ ಮಾಗಾನಹಳ್ಳಿ ಹಾಲಪ್ಪ ಅವರ ಕುಟುಂಬದ 24 ಜನರು ಒಟ್ಟಿಗೆ ಹೋಗಿ ಮತದಾನ ಮಾಡಿ ಗಮನ ಸೆಳೆದಿದ್ದರು. ಈ ಕಾರಣಕ್ಕಾಗಿ ಜಿಲ್ಲಾಡಳಿತ ಈ ಕುಟುಂಬಕ್ಕೆ ಪ್ರಥಮ ಬಹುಮಾನ ಘೋಷಣೆ ಮಾಡಿದೆ. ಸೋಮವಾರ ಸಂಜೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಾಗಾನಹಳ್ಳಿ ಹಾಲಪ್ಪ ಅವರಿಗೆ ಜಿಲ್ಲಾಧಿಕಾರಿಗಳು ಸನ್ಮಾನ ಮಾಡಲಿದ್ದಾರೆ.
December 22, 2024