ಚಿತ್ರದುರ್ಗ, ಮೇ 21- ನಗರದ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲ ಯದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ವತಿಯಿಂದ `ಪ್ರಾಜೆಕ್ಟ್ ಎಕ್ಸ್ಫೋ-2022′ ಆಯೋಜಿಸಲಾಗಿತ್ತು. ಪ್ರಾಚಾರ್ಯ ಡಾ. ಭರತ್ ಪಿ.ಬಿ. ಹಾಗೂ ಬಿಎಸ್ ಎನ್ಎಲ್ ಉಪವಿಭಾಗೀಯ ಅಭಿಯಂತರರಾದ ಸುನೀತ ಹೆಚ್. ಚಾಲನೆ ನೀಡಿದರು.
ಪ್ರದರ್ಶನದಲ್ಲಿ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಐಒಟಿ ಆಧಾರಿತ ಮಳೆ ನೀರು ಕೊಯ್ಲು ತಂತ್ರಜ್ಞಾನ, ಫೈರ್ ಫೈಟಿಂಗ್ ರೋಬೋಟ್, ಮೆಟ್ಟಿಲುಗಳನ್ನು ಹತ್ತಬಲ್ಲ ರೋಬೋಟ್, ಮೈಕ್ರೋ ಕಂಟ್ರೋಲರ್ ಆಧಾರಿತ ಬೀದಿ ದೀಪ ಬೆಳಕಿನ ನಿಯಂತ್ರಣ ಹಾಗೂ ವಿದ್ಯುತ್ ಉಳಿತಾಯ, ಅಪಘಾತಗಳನ್ನು ತಪ್ಪಿಸಲು ಇಂಟಲಿಜೆಂಟ್ ಟ್ರೈನ್ ಇಂಜಿನ್ ಮತ್ತು ರೈಲ್ವೆ ಗೇಟ್ ಕಂಟ್ರೋಲಿಂಗ್, ಹಾಗೂ ವಿಎಲ್ಎಸ್ಐ ಟೆಕ್ನಾಲಜಿ ಆಧರಿಸಿ ತಯಾರಿಸಿದ ಮತ್ತಿತರೆ ಬಹುಪಯೋಗಿ ಪ್ರಾಜೆಕ್ಟ್ಗಳು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ. ಸಿದ್ಧೇಶ್ ಕೆ. ಬಿ, ಸಂಚಾಲಕರುಗಳಾದ ಪ್ರೊ.ರೂಪ ಎಸ್, ಪ್ರೊ.ತನುಜಾ ಟಿ, ಪ್ರೊ.ಚೇತನ್ ಎಸ್, ಪ್ರೊ.ನಂದಿನಿ ಜಿ.ಆರ್. ಮತ್ತಿತರರು ಪಾಲ್ಗೊಂಡಿದ್ದರು.