ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು ಬೇಸಿಗೆ ಶಿಬಿರಗಳು ಅಗತ್ಯ: ಕೊಟ್ರೇಶ್

ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು ಬೇಸಿಗೆ ಶಿಬಿರಗಳು ಅಗತ್ಯ: ಕೊಟ್ರೇಶ್

ದಾವಣಗೆರೆ, ಮೇ 11- ನಾಯಕತ್ವ, ಸೇವಾ ಮನೋಭಾವನೆ, ಶಿಸ್ತು ಮೂಡಿಸಲು ಬೇಸಿಗೆ ಶಿಬಿರಗಳು ಅಗತ್ಯ  ಎಂದು ಎ.ಕೆ. ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಕೆ.ಬಿ. ಕೊಟ್ರೇಶ್ ಹೇಳಿದರು.

ನಗರದ ಭಾರತ ಸೇವಾದಳ ಕಚೇರಿ ಸಭಾಂಗಣದಲ್ಲಿ ಭಾರತ ಸೇವಾದಳ ಮತ್ತು ಫ್ಲೈಯಿಂಗ್ ಬರ್ಡ್ಸ್ ನೃತ್ಯ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ, ಸೇವಾ ದಳ ಸಂಸ್ಥಾಪಕ ಡಾ.ನಾ.ಸು. ಹರ್ಡೀಕರ್ ಮತ್ತು ರಾಷ್ಟ್ರಕವಿ ರವೀಂದ್ರನಾಥ್ ಅವರ ಜಯಂತ್ಯುತ್ಸವ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಕಲಿಸುವ ಈಜು, ನೃತ್ಯ, ಕರಾಟೆ, ಯೋಗ, ಚಿತ್ರಕಲೆ, ಪ್ರವಾಸ ಇತರೆ  ಚಟುವಟಿಕೆಗಳು ಮಕ್ಕಳಲ್ಲಿ ಸಂತೋಷ, ಆತ್ಮವಿಶ್ವಾಸವನ್ನು ಮೂಡಿಸುತ್ತವೆ ಎಂದರು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಹೆಚ್‌. ಚನ್ನಪ್ಪ ಪಲ್ಲಾಗಟ್ಟೆ ಮಾತನಾಡಿ,  ವಾರ್ಷಿಕ ಪರೀಕ್ಷೆಗಳು ಮುಗಿದು ಶಾಲೆಗಳಿಗೆ ರಜೆ ನೀಡಿದ ಸಂದರ್ಭದಲ್ಲಿ ಮಕ್ಕಳಿಗಾಗಿ ಏರ್ಪಡಿಸುವ ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.

ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಿ. ಪರಮೇಶ್ವರಪ್ಪ, ಎ. ಸಿದ್ದಲಿಂಗಪ್ಪ ಅವರು ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಮೆಡಲ್ ಪ್ರದಾನ ಮಾಡಿದರು.  ವಲಯ ಸಂಘಟಕ ಎಂ. ಅಣ್ಣಪ್ಪ  ಸ್ವಾಗತಿಸಿದರು. ಪರಶುರಾಮ್ ಖಟಾವ್ಕರ್ ವರದಿ ವಾಚನ ಮಾಡಿದರು.  ಶ್ರೀಮತಿ ಶೈಲಜಾ  ಪಿ.ಕೆ. ನಿರೂಪಿಸಿದರು.  ಶ್ರೀಕಾಂತ್ ಕೆ.ಪಿ. ವಂದಿಸಿದರು. 

ಮಕ್ಕಳಿಂದ ಯೋಗ, ಕರಾಟೆ, ನೃತ್ಯ, ನಾಟಕ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

error: Content is protected !!