ವಿಧಾನಸಭೆ ಚುನಾವಣೆ: ಜಿಲ್ಲೆಯಲ್ಲಿ ಶೇ. 78.12 ರಷ್ಟು ಮತದಾನ

ವಿಧಾನಸಭೆ ಚುನಾವಣೆ: ಜಿಲ್ಲೆಯಲ್ಲಿ ಶೇ. 78.12 ರಷ್ಟು ಮತದಾನ

ದಾವಣಗೆರೆ, ಮೇ 11-  ರಾಜ್ಯ ವಿಧಾನಸಭೆಗೆ ನಿನ್ನೆ ನಡೆದ ಚುನಾವಣೆಯಲ್ಲಿ ಅಂತಿಮ ಅಂಕಿ-ಅಂಶಗಳನ್ವಯ  ಜಿಲ್ಲೆಯ 7 ಕ್ಷೇತ್ರಗಳಿಂದ 1126497 ಜನರು ಮತದಾನ ಮಾಡಿದ್ದು, ಒಟ್ಟಾರೆ  ಶೇ 78.12 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ  ಶಿವಾನಂದ ಕಾಪಶಿ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ 721964 ಪುರುಷ, 720004 ಮಹಿಳೆಯರು, 118 ಇತರೆ ಸೇರಿ 1442086 ಮತದಾರರಲ್ಲಿ 573295 ಪುರುಷ, 553179 ಮಹಿಳೆಯರು ಹಾಗೂ 23 ಇತರೆ ಮತದಾರರು ಸೇರಿ ಒಟ್ಟು 1126497 ಜನರು ಮತದಾನ ಮಾಡಿದ್ದಾರೆ.  ಕ್ಷೇತ್ರವಾರು ವಿವರ ಇಂತಿದೆ.

ಜಗಳೂರು  ಶೇ. 80.38: 97690 ಪುರುಷ, 95257 ಮಹಿಳೆ, ಇತರೆ 11 ಸೇರಿ 192958 ರಲ್ಲಿ 79439 ಪುರುಷ, 75656 ಮಹಿಳೆ ಸೇರಿ 155095 ಜನರು ಮತದಾನ ಮಾಡಿದ್ದಾರೆ

ಹರಿಹರ  ಶೇ. 80.45 :  103667 ಪುರುಷ, 103832 ಮಹಿಳೆ, 18 ಇತರೆ ಸೇರಿ 207517 ಮತದಾರರಲ್ಲಿ 85247 ಪುರುಷ, 81689 ಮಹಿಳೆ, 9 ಇತರೆ ಸೇರಿ 166945 ಮತ ಚಲಾವಣೆಯಾಗಿದೆ

ದಾವಣಗೆರೆ ಉತ್ತರ ಶೇ.68.61: 119353 ಪುರುಷ, 121841 ಮಹಿಳೆ, 38 ಇತರೆ ಸೇರಿ 241232 ಮತದಾರರಲ್ಲಿ 82558 ಪುರುಷ, 82933 ಮಹಿಳೆ, 7 ಇತರೆ ಸೇರಿ 165498 ಮತದಾನ ಮಾಡಿದ್ದಾರೆ.  

ದಾವಣಗೆರೆ ದಕ್ಷಿಣ ಶೇ. 69.08:  104762 ಪುರುಷ, 105873 ಮಹಿಳೆ, 33 ಇತರೆ ಸೇರಿ 210668 ಮತದಾರರಲ್ಲಿ 73556 ಪುರುಷ, 71975 ಮಹಿಳೆ, 3 ಇತರೆ ಸೇರಿ 145534 ಮತದಾನವಾಗಿದೆ.  

ಮಾಯಕೊಂಡ  ಶೇ. 84.28: 96491 ಪುರುಷ, 94803 ಮಹಿಳೆ, 6 ಇತರೆ ಸೇರಿ 191300 ಒಟ್ಟು ಮತದಾರರಲ್ಲಿ 82623 ಪುರುಷ, 78603 ಮಹಿಳೆ, 2 ಇತರೆ ಸೇರಿ ಒಟ್ಟು 161228 ಮತ ಚಲಾವಣೆಯಾಗಿದೆ.  

ಚನ್ನಗಿರಿ  ಶೇ. 82.57: 100266 ಪುರುಷ, 99194 ಮಹಿಳೆ, 8 ಇತರೆ ಸೇರಿ 199468 ರಲ್ಲಿ 84576 ಪುರುಷ, 80123 ಮಹಿಳೆ, 1 ಇತರೆ ಸೇರಿ 164700 ಮತ ಚಲಾಯಿಸಿದ್ದಾರೆ.

ಹೊನ್ನಾಳಿ   ಶೇ. 84.19: 99735 ಪುರುಷ, 99204 ಮಹಿಳೆ, 4 ಇತರೆ ಸೇರಿ 198943 ಮತದಾರರಲ್ಲಿ 85296 ಪುರುಷ, 82200 ಮಹಿಳೆಯರು ಹಾಗೂ ಇತರೆ 1 ಸೇರಿ ಒಟ್ಟು 167497 ಮತದಾರರು ಮತ ಚಲಾಯಿಸಿದ್ದಾರೆ. 

ದಾವಣಗೆರೆ ಜಿಲ್ಲೆಯಲ್ಲಿ 2018 ರ ಚುನಾವಣೆ ಯಲ್ಲಿ 75.96 ಶೇಕಡವಾರು ಮತದಾನವಾಗಿತ್ತು. ಕ್ಷೇತ್ರವಾರು ವಿವರದನ್ವಯ ಜಗಳೂರು ಶೇ. 77.37, ಹರಿಹರ 71.17, ದಾವಣಗೆರೆ ಉತ್ತರ 64.85, ದಾವಣಗೆರೆ ದಕ್ಷಿಣ 65.54, ಮಾಯ ಕೊಂಡ 82.44, ಚನ್ನಗಿರಿ 79.91 ಹಾಗೂ ಹೊನ್ನಾ ಳಿಯಲ್ಲಿ ಶೇ 82.96 ರಷ್ಟು ಮತದಾನವಾಗಿತ್ತು. 

ಈ ಬಾರಿಯ ಮತದಾನದಲ್ಲಿ ಶೇಕಡವಾರು ಹೆಚ್ಚಳವಾದ ವಿವರ: ಜಗಳೂರು ಶೇ 3.03, ಹರಿಹರ 9.31, ದಾವಣಗೆರೆ ಉತ್ತರ 3.76, ದಕ್ಷಿಣ 3.54, ಮಾಯಕೊಂಡ 1.74, ಚನ್ನಗಿರಿ 2.63 ಹಾಗೂ ಹೊನ್ನಾಳಿ ಶೇ 1.25 ರಷ್ಟು ಮತದಾನ ಹೆಚ್ಚಳವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.

2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಶೇ. 75.68 ಹಾಗೂ 2018ರ ಚುನಾವಣೆಯಲ್ಲಿ ಶೇ.  75.67ರಷ್ಟು ಮತದಾನವಾಗಿತ್ತು. 

error: Content is protected !!