ರಾಣೇಬೆನ್ನೂರು, ಏ. 21- ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಯಾದ ಕೇನ್ಸ್ ಟೆಕ್ನಾಲಜಿಗೆ ಅಂತಿಮ ಸುತ್ತಿನಲ್ಲಿ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಶಿವಕುಮಾರ ಹಾಗೂ ಡೀನ್ ಅಕಾಡೆಮಿಕ್ ಡಾ. ಡಿ. ಎಸ್. ವಿಶ್ವನಾಥ್ ಅಭಿನಂದಿಸಿದ್ದಾರೆ.
ತರಳಬಾಳು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೇನ್ಸ್ ಕಂಪನಿಗೆ ಆಯ್ಕೆ
