ಆರೋಗ್ಯವಂತ ಮಕ್ಕಳೇ ದೇಶದ ಸಂಪತ್ತು

ಆರೋಗ್ಯವಂತ ಮಕ್ಕಳೇ ದೇಶದ ಸಂಪತ್ತು

ಮಲೇಬೆನ್ನೂರಿನಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್

ಮಲೇಬೆನ್ನೂರು ಏ. 18 – ಪಟ್ಟಣದ ಎಲ್. ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂ ಡಿದ್ದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯ ಕ್ರಮವನ್ನು  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ದೀಪ ಬೆಳಗಿಸಿ, ಉದ್ಘಾಟಿಸಿದರು.

ನಂತರ ಮಾತನಾಡಿದ ನಾಗರಾಜ್ ಅವರು ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದ ಉದ್ದೇಶ ತಿಳಿಸಿ, ಎಲ್ಲಾ ಮಕ್ಕಳ  ಸರ್ವತೋಮುಖ ಅಭಿವೃದ್ಧಿಗಾಗಿ ಸರಿಯಾದ ರೀತಿಯಲ್ಲಿ ಪೂರಕ ಆಹಾರವನ್ನು ನೀಡಬೇಕು. ಮಗುವಿಗೆ ಪೂರಕ ಆಹಾರವನ್ನು ಯಾವ ರೀತಿ ಸಿದ್ಧಪಡಿಸಬೇಕು ಹಾಗೂ ಮಕ್ಕಳ ಅಪೌಷ್ಟಿಕತೆಯನ್ನು ಯಾವ ರೀತಿ ತಡೆಗಟ್ಟಬೇಕು ಎಂಬ ವಿಷಯದ ಬಗ್ಗೆ ತಿಳಿದು ಕೊಂಡು, ಸರಿಯಾದ ಆಹಾರವನ್ನು ತಯಾರಿಸಿ ಮಗುವಿಗೆ ಉಣಬಡಿಸುವುದರಿಂದ ಆರೋಗ್ಯ ವಂತ ಮಕ್ಕಳಾಗಿ ಬೆಳೆಯುತ್ತಾರೆ ಎಂದರು. 

ಮಕ್ಕಳ ತೂಕ, ಎತ್ತರ, ಕೈ ಸುತ್ತಳತೆ ಮತ್ತು ಲಸಿಕೆ ಹಾಕಲಾಗಿದೆಯೇ ಎಂಬುವುದನ್ನು ಪರಿಗಣಿಸಿ ಅಂತ ಮಗುವನ್ನು ಆರೋಗ್ಯವಂತ ಮಗು ಎಂದು ಗುರುತಿಸಲಾಗುತ್ತದೆ. ಹುಟ್ಟಿನಿಂದ ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರ ನೀಡಬೇಕು. ಆರು ತಿಂಗಳ ನಂತರ ಪೂರಕ ಆಹಾರವನ್ನು ಪ್ರಾರಂಭಿಸಿ ಎಲ್ಲಾ ದ್ವಿದಳ ಧಾನ್ಯಗಳನ್ನು ನೆನೆಹಾಕಿ, ನೆನೆದ ನಂತರ ನೆರಳಿನಲ್ಲಿ ಒಣಗಿಸಿ ಮಿಕ್ಸಿಯಲ್ಲಿ ಹಾಕಿ ಹಿಟ್ಟನ್ನ ತಯಾರಿಸಿಕೊಂಡು ಇಟ್ಟುಕೊಳ್ಳಿ, ಮಗುವಿಗೆ ಬೇಕಾದಾಗ ಈ ಹಿಟ್ಟನ್ನು ಬಳಸಿ ಸರಿಯಾದ ಪ್ರಮಾಣದಲ್ಲಿ ಉಪ್ಪು ಮತ್ತು ಬೆಲ್ಲವನ್ನು ಸಹ ಬೆರೆಸಿ ಮಾಲ್ಟ್‌ (ದ್ರವ ರೂಪದಲ್ಲಿ) ಸಿದ್ಧಪಡಿಸಿಕೊಂಡು ಮಗುವಿಗೆ  ಉಣಬಡಿಸಿದ್ದಲ್ಲಿ ಮಕ್ಕಳು ಅತ್ಯುತ್ತಮವಾಗಿ ಬೆಳವಣಿಗೆಯಾಗುತ್ತಾರೆ ಎಂದು ನಾಗರಾಜ್ ಹೇಳಿದರು.  

ಪುರಸಭೆ ಸದಸ್ಯೆ ಶ್ರೀಮತಿ ಸುಲೋಚನಮ್ಮ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜಣ್ಣ, ಸ್ವಸಹಾಯ ಸಂಘದ ಅಧ್ಯಕ್ಷರಾದ ಶ್ರೀಮತಿ ವನಜಾಕ್ಷಮ್ಮ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣ್, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಯಾಸ್ಮಿನ್ ಭಾನು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮಂಜುಳಾ ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 

error: Content is protected !!