ದಾವಣಗೆರೆ, ಏ.18- ಡಾ. ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತಿಯ ಸಮಾರಂಭವನ್ನು ಕೆಎಸ್ಆರ್‌ಟಿಸಿ ದಾವಣಗೆರೆ ಘಟಕ ಎರಡರಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ಘಟಕ ವ್ಯವಸ್ಥಾಪಕ ಮರಳುಸಿದ್ದಪ್ಪ, ಸಹಾಯಕ ಸಂಚಾರ ನಿರೀಕ್ಷಕ ಚೇತನ್ ಕುಮಾರ್, ವಿಭಾಗದ ಉಗ್ರಾಣಾಧಿಕಾರಿ ಶ್ರೀಮತಿ ನೀತಾ ಮಂಜುನಾಥ್, ಚಾಲಕ ಕಂ ನಿರ್ವಾಹಕ ಶಿವಕುಮಾರ ಕಲ್ಲಳ್ಳಿ, ಸೌಭಾಗ್ಯ, ಪುಟ್ಟಪ್ಪ, ಸಾಂಗ್ಲಿಯಾನ, ಆನಂದ ನಾಯ್ಕ ಹಾಗೂ ಕ.ರಾ.ರ. ಸಾರಿಗೆ ನಿಗಮದ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಎಮ್. ವೀರಯ್ಯ ಮತ್ತು ಇತರರು ಹಾಜರಿದ್ದರು.
ಕೆಎಸ್ಆರ್‌ಟಿಸಿ ನಗರ ಘಟಕ-2ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
