ಮಲೇಬೆನ್ನೂರು,ಏ.17- ಪಟ್ಟಣದ ವಿವಿಧೆಡೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 132 ನೇ ಜಯಂತಿಯನ್ನು ಚುನಾವಣಾ ನೀತಿ ಸಂಹಿತೆ ಕಾರಣದಿಂದಾಗಿ ಸರಳವಾಗಿ ಆಚರಿಸಲಾಯಿತು.
ಇಲ್ಲಿನ ನಾಡ ಕಛೇರಿಯಲ್ಲಿ ಉಪ ತಹಸೀಲ್ದಾರ್ ಆರ್ ರವಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ಕಂದಾಯ ನಿರೀಕ್ಷಕ ಆನಂದ್, ಗ್ರಾಮಲೆಕ್ಕಾಧಿಕಾರಿ ಗಳಾದ ಅಣ್ಣಪ್ಪ, ಕೊಟ್ರೇಶ್, ಶಿವಕುಮಾರ್, ದೊಡ್ಡ ಬಸವರಾಜ್, ಕಛೇರಿಯ ಪುಷ್ಪಾ ಹಿರೇಮಠ್, ಸುಜಾತ, ಬಸವರಾಜ್, ಮಾರುತಿ, ಎಳೆಹೊಳೆ ರಾಮಚಂದ್ರ, ಗುಳದಹಳ್ಳಿ ರಾಜಪ್ಪ ಈ ವೇಳೆ ಹಾಜರಿದ್ದರು.
ಪುರಸಭೆ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ಅಧಿಕಾರಿಗಳಾದ ಏಕನಾಥ್, ದಿನಕರ್, ಉಮೇಶ್, ಪ್ರಭು, ಹಾಲೇಶಪ್ಪ, ನವೀನ್ ಹಾಗೂ ಸಿಬ್ಬಂದಿ ವರ್ಗದವರು, ಪೌರ ಕಾರ್ಮಿಕರು ಹಾಜರಿದ್ದರು.
ಎ.ಕೆ. ಕಾಲೋನಿಯ ಅಂಬೇಡ್ಕರ್ ಭವನದಲ್ಲಿ ಯುವಕರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಿ.ಎಸ್.ಐ. ಪ್ರಭು ಕೆಳಗಿನಮನೆ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಪುರಸಭೆ ಸದಸ್ಯ ಎ.ಕೆ. ಲೋಕೇಶ್, ಪಿ.ಆರ್. ರಾಜು, ಸುಬ್ಬಿ ರಾಜಣ್ಣ, ನರಸಿಂಹಪ್ಪ, ಪ್ರಕಾಶ್, ನಾಗರಾಜ್ ಸೇರಿದಂತೆ ಇನ್ನೂ ಅನೇಕರು ಪಾಲ್ಗೊಂಡಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸಿರಿಗೆರೆ ರಾಜಣ್ಣ, ಉಪಾಧ್ಯಕ್ಷೆ ಚಂದ್ರಮ್ಮ, ನಿರ್ದೇಶಕರಾದ ಜಿ.ಮಂಜುನಾಥ ಪಟೇಲ್. ಕೆ.ಪಿ. ಗಂಗಾಧರ್, ಯೂನೂಸ್, ನಾಗರತ್ನಮ್ಮ ಕೆ.ಜಿ., ಪರಮೇಶ್ವರಪ್ಪ, ರೇವಮ್ಮ, ಐರಣಿ ಪುಟ್ಟಪ್ಪ, ಎ.ಕೆ.ನರಸಿಂಹಪ್ಪ. ಸಂಘದ ಸಿಇಓ ಸಿದ್ದಪ್ಪ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು.