ಮಲೇಬೆನ್ನೂರು, ಏ. 14- ಜಿಗಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಶಿಕ್ಷಕ ಗುಡ್ಡಪ್ಪ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಎಂಬ ಚೈತನ್ಯ ಸಂದೇಶವನ್ನು ದೀನ-ದಲಿತರು, ಹಿಂದುಳಿದವರು ಹಾಗೂ ಆರ್ಥಿಕವಾಗಿ ಶೋಷಣೆಗೊಳಗಾದ ಜನರಲ್ಲಿ ತುಂಬಿದ ಮಹಾ ಚೇತನ ಡಾ. ಬಿ.ಆರ್. ಅಂಬೇಡ್ಕರ್ ಅವರಿಂದಾಗಿ ಇಂದು ಸಮಾಜದಲ್ಲಿ ಎಲ್ಲರೂ ಸಮಾನವಾಗಿ, ಸ್ವತಂತ್ರವಾಗಿ ಬದುಕುವಂತಾಗಿದೆ. ಅಂಬೇಡ್ಕರ್ ಅವರು ಕಷ್ಟಪಟ್ಟಿದ್ದರ ಪರಿಣಾಮ, ಪ್ರಸ್ತುತ ನಾವೆಲ್ಲರೂ ಈ ರೀತಿ ಜೀವನ ಸಾಗಿಸುವಂತಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರಂತೆ ಪ್ರತಿಯೊಬ್ಬರೂ ಸಮಾಜದ ಚಿಂತನೆ ಹೊಂದುವ ಮೂಲಕ ಎಲ್ಲರಿಗೂ ನ್ಯಾಯ ಸಿಗುವಂತೆ ಕಾರ್ಯ ನಿರ್ವಹಿಸಬೇಕೆಂದರು.
ಎಸ್‌ಡಿಎಂಸಿ ಅಧ್ಯಕ್ಷ ಬಿ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಜಿ. ಆನಂದಪ್ಪ, ಬಿ.ಎಂ. ದೇವೇಂದ್ರಪ್ಪ, ಜಿ.ಎಂ. ಆನಂದಪ್ಪ, ಕೆ.ಎಸ್. ನಂದ್ಯಪ್ಪ, ಜಿ.ಪಿ. ಹನುಮಗೌಡ, ಬಿ. ಸೋಮಶೇಖರಾ ಚಾರಿ, ಭೋವಿ ಮಂಜಣ್ಣ, ಬೆಣ್ಣೇರ ನಂದ್ಯಪ್ಪ, ಮಹಾಂ ತೇಶ್ ಸ್ವಾಮಿ, ನೀರಗಂಟಿ ರಂಗಪ್ಪ, ಎ.ಕೆ. ಕಾಲೋನಿಯ ಬಿ.ಆರ್. ಪ್ರದೀಪ್, ಶಶಿಕುಮಾರ್, ಎಲ್‌ಕೆಜಿ ಯುಕೆಜಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರ್, ಡಿ.ಪಿ. ಚಿದಾನಂದಪ್ಪ, ಮಣಿಕಂಠ, ಬಿ. ಮಹಾಲಿಂಗಪ್ಪ, ಕೆ.ಆರ್. ಶಿವರುದ್ರಪ್ಪ, ಎಸ್‌ಡಿಎಂಸಿ ಸದಸ್ಯರಾದ ಶ್ರೀಮತಿ ಸುನೀತಾ ನಾಗರಾಜ್, ಶ್ರೀಮತಿ ಮಂಜುಳಾ ಮಹಾಂತೇಶ್, ಪತ್ರಕರ್ತ ಪ್ರಕಾಶ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಧಾ, ಶಿಕ್ಷಕರಾದ ನಾಗೇಶ್, ಲಿಂಗರಾಜ್, ಲೋಕೇಶ್, ಮಲ್ಲಿಕಾರ್ಜನ್, ಶ್ರೀನಿವಾಸ್ ರೆಡ್ಡಿ, ಕುಸುಮ, ವೀಣಾ ಮತ್ತಿತರರು ಭಾಗವಹಿಸಿದ್ದರು.
ಗ್ರಾ.ಪಂ. ಕಛೇರಿಯಲ್ಲೂ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಪಿಡಿಓ ಉಮೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಈ ವೇಳೆ ಹಾಜರಿದ್ದರು.