ಹರಿಹರ, ಏ. 13 – ಮತದಾನದ ಬಗ್ಗೆ ಜಾಗೃತಿ ಮೂಡಿಸಲು ತಾಲ್ಲೂಕು ಪಂಚಾಯ್ತಿ ಆವರಣದಿಂದ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಚುನಾವಣೆ ಅಧಿಕಾರಿ ಉದಯ್ ಕುಮಾರ್ ಕುಂಬಾರ, ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾ.ಪಂ. ಇಓ ರವಿ, ಬಿಇಓ ಹನುಮಂತಪ್ಪ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ರಾಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾ.ಪಂ. ಇಲಾಖೆ ಪೂಜಾ, ಲಿಂಗರಾಜ್, ನಗರಸಭೆ ಅಣ್ಣಪ್ಪ, ಪ್ರಕಾಶ್, ಮಂಜುನಾಥ್, ಶಿಕ್ಷಣ ಇಲಾಖೆ ಬಸವರಾಜಯ್ಯ, ಸಿಡಿಪಿಓ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.
ಹರಿಹರ : ಮತದಾನದ ಜಾಗೃತಿಗೆ ಬೈಕ್ ರ್ಯಾಲಿ
