ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ

ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ - Janathavaniದಾವಣಗೆರೆ, ಸೆ.17- ನಗರ ಪಾಲಿ ಕೆಯ ಹಣದಲ್ಲಿ ಅರ್ಧ ಕಪ್ ಚಹಾ ಕುಡಿ ಯಲೂ ಸಹ ನಾನು ಇಷ್ಟಪಡುವು ದಿಲ್ಲ. ಇನ್ನು ಕಂಟ್ರ್ಯಾಕ್ಟರ್ ಹತ್ತಿರ ಕಮೀಷನ್ ಪಡೆಯುವುದು ದೂರದ ಮಾತು ಎಂದು ಸ್ಪಷ್ಟನೆ ನೀಡುವ ಮೂಲಕ ಮೇಯರ್ ಬಿ.ಜಿ. ಅಜಯ್‌ಕುಮಾರ್ ಅವರು ನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಆರೋಪವನ್ನು ತಳ್ಳಿಹಾಕಿದ್ದಾರೆ.

ಇಂದಿಲ್ಲಿ ಪಾಲಿಕೆಯ ತಮ್ಮ ಕಚೇರಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಬಂದು ನಾವೇ ಒದ್ದಾಡುತ್ತಿದ್ದೇವೆ. ಯಾವುದೇ ಟೆಂಡರ್ ಕೂಡ ಕರೆದಿಲ್ಲ. ಇನ್ನೂ ಕಮೀ ಷನ್ ಪಡೆಯುವುದು ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು. ಇನ್ನು ಮುಂದೆ ಆಪಾದಿಸುವುದಾದರೆ ದಾಖಲೆ ಇಟ್ಟು ಕೊಂಡು ಆರೋಪ ಮಾಡಲಿ. ಇಲ್ಲವಾದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾವು ಸರ್ಕಾರಿ ಕಾರನ್ನೇ ನಾಲ್ಕು ತಿಂಗಳು ಬಳಸಿರಲಿಲ್ಲ. ತಮ್ಮದೇ ಕಾರು  ಬಳಸಿದ್ದೆ. ಸುಮ್ಮನೇ ಯಾಕೆ ಸರ್ಕಾರಕ್ಕೆ 25-30 ಸಾವಿರ ಹೊರೆ ಮಾಡಬೇಕೆಂದು. ಆದರೆ, ಹಿರಿಯ ಮುಖಂಡರು ಅದೊಂದು ಸರ್ಕಾರದ ಶಿಷ್ಟಾಚಾರ ಅದೇ ಕಾರನ್ನು ಬಳಸಿ ಎಂದು ಸಲಹೆ ನೀಡಿದ ನಂತರ  ಸರ್ಕಾರಿ ಕಾರನ್ನು ಉಪಯೋಗಿಸುತ್ತಿದ್ದೇನೆ ಎಂದು ಹೇಳಿದರು.

ದಾವಣಗೆರೆ ಸ್ಮಾರ್ಟ್‌ ಸಿಟಿಗೆ ಆಯ್ಕೆಯಾಗಲು ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಶ್ರಮವೇ ಕಾರಣ ಎಂದು ಹೇಳುತ್ತಾರೆ. ಸ್ಮಾರ್ಟ್‌ ಸಿಟಿ ಯೋಜನೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದ ವೇಳೆ ಜಾರಿಗೆ ತರಲಾಗಿ ದ್ದೇ ವಿನಾಃ ಮನ ಮೋಹನ್ ಸಿಂಗ್ ಇದ್ದಾಗಲಲ್ಲ. ಸಂಸದರು ದಾವಣಗೆರೆಯನ್ನು ಆಯ್ಕೆ ಮಾಡುವಂತೆ ಮನವಿ ಕೊಟ್ಟಿದ್ದರಿಂದಲೇ ದಾವಣಗೆರೆ ಸ್ಮಾರ್ಟ್‌ ಸಿಟಿಗೆ ಆಯ್ಕೆಯಾಗಿದೆ ಎಂದು ಮೇಯರ್ ಅಜಯ್ ಕುಮಾರ್ ತಿಳಿಸಿದರು.

ಸಿದ್ದೇಶ್ವರ ಅವರದ್ದು ಸರ್ವಾಧಿಕಾರಿ ಧೋರಣೆ ಎಂದು ಆರೋಪಿಸುವ ದಿನೇಶ್ ಶೆಟ್ಟಿ ಅವರಿಗೆ ನಾಲಿಗೆ ಮೇಲೆ ಹಿಡಿತವಿದ್ದಂತೆ ಕಾಣುವುದಿಲ್ಲ. ಸಂಸದರಿಗೆ ಗೌರವ ಕೊಡಬೇಕೆನ್ನುವ ಸೌಜನ್ಯತೆ ಅವರಿಗಿದ್ದಂತೆ ಕಾಣುತ್ತಿಲ್ಲ. ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್ ಅಂತಹವರೇ ಸಂಸದರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಏಕೆಂದರೆ ಅವರಿಗೆ ಸತ್ಯ ಗೊತ್ತಿದೆ. ಆದರೆ, ಈತ ಕಾಂಗ್ರೆಸ್‌ನ ಒಬ್ಬ ಪ್ರಧಾನ ಕಾರ್ಯದರ್ಶಿ ಯಾಗಿದ್ದುಕೊಂಡು ಹೀಗೆ ಮನಬಂದಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ನಾನು ಬ್ರೆಡ್, ಲಾಟರಿ ಮಾರಿ, ಆಟೋ ಓಡಿಸುವುದು ಸೇರಿ 43 ಕೆಲಸ ಮಾಡಿದ ವನು. ನನ್ನಂತಹ ಸಾಮಾನ್ಯ ವ್ಯಕ್ತಿಯನ್ನು ನಮ್ಮ ಪಕ್ಷ ಗುರುತಿಸಿ ಮೇಯರ್ ಮಾಡಿದೆ. ಬಿಜೆಪಿ ಪಕ್ಷದಲ್ಲಿ `ಸರ್ವಾಧಿಕಾರಿ ಧೋರಣೆ’ ಎಂಬ ಪದವಿಲ್ಲ. ಹಾಗಿದ್ದರೆ ಆರ್ಥಿಕ ಸಬಲರೇ ಇರುವ 21 ಜನ ಕಾರ್ಪೊರೇಟರ್‌ಗಳಲ್ಲಿ ನನ್ನನ್ನು ಆಯ್ಕೆ ಮಾಡುತ್ತಿರಲಿಲ್ಲ. ನಮ್ಮನ್ನು ಒಂದೇ ರೀತಿಯಾಗಿ ನಮ್ಮ ನಾಯಕರು ನೋಡಿ ಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

ಯಶವಂತರಾವ್‌ ಜಾಧವ್‌ ಅವರು ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಡೋರ್‌ ನಂಬರ್‌ ನೀಡಲಾಗಿದೆ ಎಂದು ದಿನೇಶ್‌ ಶೆಟ್ಟಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದ ಮೇಯರ್‌, ಈ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸಲಿ ಎಂದರು.

ದಿನೇಶ್ ಶೆಟ್ಟಿ ಒಳ್ಳೆಯ ಕೆಲಸಗಾರ. ಪಿಜೆ ಬಡಾವಣೆ ಅಭಿವೃದ್ಧಿ ಮಾಡಿದ್ದಾರೆಂದು ಒಪ್ಪಿಕೊಳ್ಳುತ್ತೇನೆ. ಅವರ ಕೆಲಸದ ಬಗ್ಗೆ ನಾನು ಟೀಕಿಸುವುದಿಲ್ಲ. ಆದರೆ, ಅವರು ವಿನಾಕಾರಣ ಸುಳ್ಳು ಆರೋಪ ಮಾಡುತ್ತಿರುವುದು ಒಳ್ಳೆಯದಲ್ಲ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪ್ರಸನ್ನ ಕುಮಾರ್, ಎಸ್.ಟಿ. ವೀರೇಶ್, ಗೋಪಿನಾಥ್, ವಿನಯ್ ದಿಳ್ಳೆಪ್ಪ, ಗೌರಮ್ಮ ಗಿರೀಶ್, ಧನರಾಜ್, ನರೇಂದ್ರಕುಮಾರ್ ಉಪಸ್ಥಿತರಿದ್ದರು.

error: Content is protected !!