ಕೊರೊನಾಗೆ ಮೊದಲಿನ ಸ್ಥಿತಿಗೆ ನ್ಯಾಯಾಲಯಗಳು ಮರಳಲು ವಕೀಲರ ಮಂಡಳಿ ಮನವಿ
ಬೆಂಗಳೂರು, ಸೆ. 7 – ಲಾಕ್ಡೌನ್ಗೆ ಮೊದಲಿದ್ದ ರೀತಿಯಲ್ಲಿ ನೇರವಾಗಿ ಪ್ರಕರಣಗಳ ಕಡತಗಳನ್ನು ಸಲ್ಲಿಸಲು ಅನುಮತಿ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಅವರಿಗೆ ರಾಜ್ಯ ವಕೀಲರ ಮಂಡಳಿ ಒತ್ತಾಯಿಸಿದೆ.
ರಾಜ್ಯದ ನ್ಯಾಯಾಲಯಗಳಲ್ಲಿ ಸಾಮಾನ್ಯ ಪರಿಸ್ಥಿತಿ ನೆಲೆಗೊಳಿಸುವುದೂ ಸೇರಿದಂತೆ ಹಲವಾರು ನಿರ್ಣಯ ಗಳನ್ನು ಮಂಡಳಿಯ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಲಾಕ್ಡೌನ್ಗೆ ಮುಂಚೆ ವಕೀಲರು ನೇರವಾಗಿ ನ್ಯಾಯಾಲಯದ ಎದುರು ಹಾಜರಾಗಿ ಕಡತಗಳನ್ನು ಸಲ್ಲಿಸುತ್ತಿದ್ದ ರೀತಿಯಲ್ಲೇ ಈಗಲೂ ಕಡತಗಳನ್ನು ಸಲ್ಲಿ ಸಲು ಅನುಮತಿ ನೀಡಬೇಕೆಂದು ಮುಖ್ಯ ನ್ಯಾಯ ಮೂರ್ತಿ ಬಳಿ ಮನವಿ ಮಾಡಿಕೊಳ್ಳಲು ಮಂಡಳಿ ನಿರ್ಧರಿಸಿ ರುವುದಾಗಿ, ಸಭೆಯ ನಿರ್ಣಯದಲ್ಲಿ ಹೇಳಲಾಗಿದೆ.
ಆನ್ಲೈನ್ ಮೂಲಕ ಮಾತ್ರ ನ್ಯಾಯಾಲಯಗಳು ನಡೆಯುತ್ತಿರುವುದರಿಂದ ಹಾಗೂ ಭೌತಿಕ ಹಾಜರಾತಿ ಯಲ್ಲಿ ಪೂರ್ಣ ಪ್ರಮಾಣದ ಕಾರ್ಯ ನಿರ್ವಹಣೆ ನಡೆಯದ ಕಾರಣ ಹಲವಾರು ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಂಡಳಿ ಹೇಳಿದೆ.
ಇದರಿಂದಾಗಿ ವಕೀಲರು ಹಾಗೂ ಕಕ್ಷಿದಾರರೂ ಸಹ ಸಮಸ್ಯೆ ಹಾಗೂ ಸಂಕಷ್ಟಗಳನ್ನು ಎದುರಿಸು ವಂತಾಗಿದೆ ಎಂದು ಹೇಳಿರುವ ವಕೀಲರ ಒಕ್ಕೂಟ, ತಮ್ಮ ವಾಹನಗಳನ್ನು ನ್ಯಾಯಾಲಯಗಳ ಆವರಣದಲ್ಲಿ ತರಲು ಅವಕಾಶ ನೀಡಬೇಕು ಎಂದೂ ಸಹ ಕೇಳಿದೆ.
ಸುರಕ್ಷತಾ ಕ್ರಮಗಳೊಂದಿಗೆ ನ್ಯಾಯಾಲಯಗಳಲ್ಲಿ ಟೈಪಿಸ್ಟ್, ಕೆಫೆಟೇರಿಯಾ ಹಾಗೂ ನೋಟರಿಗಳು ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕಿದೆ ಎಂದೂ ಸಹ ಅಭಿಪ್ರಾಯ ಪಡಲಾಗಿದೆ.