ದಾವಣಗೆರೆ, ಆ. 27- ಜಿಲ್ಲೆಯಲ್ಲಿ ಗುರುವಾರ 389 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಓರ್ವ ಸಾವನ್ನಪ್ಪಿದ್ದು, 236 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ 8149 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 173 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 6028 ಜನರು ಬಿಡುಗಡೆಯಾಗಿದ್ದು, 1948 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 189, ಹರಿಹರ 91, ಜಗಳೂರು 9, ಚನ್ನಗರಿ 30, ಹೊನ್ನಾಳಿ 59 ಹಾಗೂ ಹೊರ ಜಿಲ್ಲೆಯ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ವಿಜಯ ನಗರ ಬಡಾವಣೆಯ 60 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.
ಹರಿಹರ ತಾಲ್ಲೂಕಿನ 63 ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಢ
ಹರಿಹರ, ಆ. 27- ಹರಿಹರ ನಗರದ ಹಲವಾರು ಬಡಾವಣೆ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು 63 ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದರು.
ನಗರದಲ್ಲಿ 659, ಗ್ರಾಮೀಣ ಪ್ರದೇಶದಲ್ಲಿ 573 ಸೇರಿ ಇಲ್ಲಿಯವರೆಗೆ ಒಟ್ಟು 1232 ವ್ಯಕ್ತಿಗ ಳಿಗೆ ಕೊರೊನಾ ಸೋಂಕು ಹರಡಿಕೊಂಡಿದ್ದು, ಅದರಲ್ಲಿ 609 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಐಸೋಲೇಷನ್ ನಲ್ಲಿ 452, ದಾವಣಗೆರೆಯ ಸಿ.ಜಿ. ಆಸ್ಪತ್ರೆಯಲ್ಲಿ 154, ಕೋವಿಡ್ ಕೇರ್ ಸೆಂಟರ್ ನಲ್ಲಿ 180, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 357 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 227 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯವರೆಗೆ 12392 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ನಗರ ಸೇರಿದಂತೆ ತಾಲ್ಲೂಕಿನಲ್ಲಿ 377 ಕಂಟೈನ್ಮೆಂಟ್ ಝೋನ್ ಗಳಿದ್ದು, ಅದರಲ್ಲಿ 23 ಅವಧಿ ಮುಗಿದಿದೆ. ಉಳಿದ 364 ಕಂಟೈನ್ಮೆಂಟ್ ಝೋನ್ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಲೇಬೆನ್ನೂರಿನಲ್ಲಿ 10 ಜನರಿಗೆ ಸೋಂಕು
ಮಲೇಬೆನ್ನೂರು, ಆ. 27- ಪಟ್ಟಣ್ಣದಲ್ಲಿ ಗುರುವಾರ ಇಬ್ಬರು ಪೊಲೀಸರು ಸೇರಿದಂತೆ 10 ಜನರಿಗೆ ಕೊರೊನಾ ತಗಲಿದೆ. ಹೊಳೆ ಸಿರಿಗೆರೆ ಯಲ್ಲಿ ಇಬ್ಬರಿಗೆ , ಕೊಕ್ಕನೂರು, ಉಕ್ಕಡಗಾತ್ರಿ ಯಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂ ಡಿದೆ ಎಂದು ಉಪ ತಹಶೀಲ್ದರ್ ರವಿ ತಿಳಿಸಿದ್ದಾರೆ.
87 ಜನರಿಗೆ ಟೆಸ್ಟ್: ಗುರುವಾರ ನಂದಿಗಾವಿ ಗ್ರಾಮದಲ್ಲಿ 39 ಜನರಿಗೆ ಮತ್ತು ಭಾನುವಳ್ಳಿಯಲ್ಲಿ 48 ಜನರಿಗೆ ಕೊರೊನಾ ರಾಪಿಡ್ ಟೆಸ್ಟ್ ಮಾಡಲಾಗಿದ್ದು ಭಾನುವಳ್ಳಿಯಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ ಎಂದು ಹಿರಿಯ ಆರೋಗ್ಯ ಸಹಾಯಕ ಎಂ. ಉಮಣ್ಣ ಮಾಹಿತಿ ನೀಡಿದ್ದಾರೆ.