ದಾವಣಗೆರೆ, ಆ.10- ಇದೇ ದಿನಾಂಕ 17ರಂದಿನ ಕಡೇ ಶ್ರಾವಣ ಸೋಮವಾರ ನಡೆಯಬೇಕಿದ್ದ ಐತಿ ಹಾಸಿಕ ಶ್ರೀ ಕ್ಷೇತ್ರ ಆನೆಕೊಂಡ ಕಾರಣಿಕ ಮತ್ತು ಜಾತ್ರೆ ಯನ್ನು ರದ್ದುಪಡಿಸಲಾಗಿದೆ ಎಂದು ಆನೆಕೊಂಡದ ಶ್ರೀ ಬಸವೇಶ್ವರ ಮುಜರಾಯಿ ಸಮಿತಿ ಪಿ.ಬಿ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಆನೆಕೊಂಡದ ಶ್ರೀ ಬಸವೇಶ್ವರ, ನೀಲಾ ನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ, ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ಮತ್ತು ಸುತ್ತಮುತ್ತಲಿನ ಗ್ರಾಮದ ದೇವರುಗಳನ್ನೊಳಗೂಡಿ ಕಾರಣಿಕ ಮಹೋತ್ಸವ ನಡೆಯಬೇಕಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ರದ್ದುಪಡಿಸಲಾಗಿದೆ. ದೇವಸ್ಥಾನದಲ್ಲಿ ದೇವರ ದರ್ಶನ ಎಂದಿನಂತೆ ಇರುತ್ತದೆ.
December 25, 2024