ದಾವಣಗೆರೆ, ಆ. 25- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ದೇವರಮನಿ ಶಿವಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಸ್ಥಳೀಯ ಮಾರುತಿರಾವ್ ಘಾಟ್ಗೆ, ಲಕ್ಷ್ಮಣ, ಗೌರಮ್ಮ ವಿ.ಪಾಟೀಲ್, ಹರಿಹರದ ಬಾತಿ ಚಂದ್ರಶೇಖರ್ ಅವರುಗಳನ್ನು ಸದಸ್ಯರುಗಳನ್ನಾಗಿ ಸರ್ಕಾರ ನೇಮಕ ಮಾಡಿದೆ.
ನೂತನ ಅಧ್ಯಕ್ಷ ಶಿವಕುಮಾರ್ ಅವರು ನಾಳೆ ದಿನಾಂಕ 26ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಕೆಇಬಿ ವೃತ್ತದ ಡಾ.ಬಿ. ಆರ್ ಅಂಬೇಡ್ಕರ್, ಕಾಯಿಪೇಟೆಯ ಶ್ರೀ ಬಸವೇಶ್ವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ, ನಗರ ದೇವತೆ ಶ್ರೀ ದುರ್ಗಾಂಬಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಶಿವಾಜಿ ವೃತ್ತದ ಶಿವಾಜಿ, ಶ್ರೀ ವೀರ ಮದಕರಿ ನಾಯಕ ವೃತ್ತದ ಶ್ರೀ ವೀರ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ ವೃತ್ತದ ಶ್ರೀ ಸಂಗೊಳ್ಳಿ ರಾಯಣ್ಣ, ಶ್ರೀ ದೇವರಾಜ ಅರಸು ಅವರುಗಳ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡುವರು. ಅಲ್ಲಿಂದ ದೂಡಾ ಕಚೇರಿಗೆ ತೆರಳಿ, ಮಧ್ಯಾಹ್ನ 12.30ಕ್ಕೆ ದೂಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಎಸ್.ವಿ. ರಾಮಚಂದ್ರ, ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.