ದೂಡಾ ನಿವೇಶನ ಅರ್ಜಿ : ಬಡವರನ್ನು ದಾರಿ ತಪ್ಪಿಸುವ ಕೆಲಸ

ದಾವಣಗೆರೆ, ಆ.25- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ  ದಿಂದ ನಿವೇಶನಕ್ಕಾಗಿ ಸಮೀಕ್ಷೆ ದೃಷ್ಟಿಯಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ನಿವೇಶನ ರಹಿತ ಸಾವಿರಾರು ಕುಟುಂಬಗಳು ಮಾಹಿತಿ ಕೊರತೆಯಿಂದ ಉಚಿತ ನಿವೇಶನ ಎಂದು ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ದೂರಿದ್ದಾರೆ.

ಕೋವಿಡ್ 3ನೇ ಅಲೆ ಮುನ್ಸೂಚನೆ ಇದ್ದರೂ ಸಹ, ದೂಡಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವಿರಾರು ಜನರು ಮಾಸ್ಕ್ ಇಲ್ಲದೇ ಪರಸ್ಪರ ಅಂತರ ಕಾಪಾಡಿಕೊ ಳ್ಳದೇ ಅರ್ಜಿ ಪಡೆಯಲು ಪ್ರತಿ ದಿನ ಕೂಲಿ ಮಾಡಿ ಜೀ ವನ ನಡೆಸುವ ಜನರು ಕೆಲಸಕ್ಕೆ ರಜೆ ಹಾಕಿ ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ನಾಗರಾಜ್‌ ತಿಳಿಸಿದ್ದಾರೆ.

ದೂಡಾ ಅಧಿಕಾರಿಗಳು ಅರ್ಜಿ ಸಲ್ಲಿಸಲು ಬರುವ ಜನರಿಗೆ ಸರಿಯಾದ ಮಾಹಿತಿ ನೀಡಿದರೆ ಈ ಸಮಸ್ಯೆ ಉಲ್ಬಣವಾಗುವುದಿಲ್ಲ. ಆದರೆ ಪ್ರಾಧಿಕಾರದವರು ಅರ್ಜಿಗೆ 100 ರೂ. ಹಾಗೂ ನೋಂದಣಿಗೆಂದು 1 ಸಾವಿರದಿಂದ 2 ಸಾವಿರದವರೆಗೂ ಹಣ ಕಟ್ಟಿಸಿಕೊಳ್ಳುವ ಹಣದ ದಾಹಕ್ಕೆ ಜನತೆ ಬಲಿಪಶುವಾಗುತ್ತಿದ್ದಾರೆ.

ಈಗ ಕೊರೊನಾ ಮಹಾಮಾರಿ ತಂದುಕೊಳ್ಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಿದವರು ಅಭಿವೃದ್ಧಿಪಡಿಸಿದ ನಿವೇಶನ ವಿಲೇವಾರಿಗೆ ಮತ್ತೆ ಅರ್ಜಿ ಸಲ್ಲಿಸಬೇಕಿದೆ. ಇದು ಬಡವರನ್ನು ದಾರಿ ತಪ್ಪಿಸುವ ಕೆಲಸವಾಗಿದ್ದು, ಜಿಲ್ಲಾಧಿಕಾರಿಗಳು ಈ ಕೂಡಲೇ ಮಧ್ಯೆ ಪ್ರವೇಶಿಸಿ ಬಡವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುವಂತೆ ದೂಡಾಕ್ಕೆ ಸೂಚಿಸಬೇಕು ಎಂದು  ಅವರು ಆಗ್ರಹಿಸಿದ್ದಾರೆ.

1999-2004ರ ಶಾಮನೂರು ಮಲ್ಲಿಕಾರ್ಜುನ್ ಅವರು ಮಂತ್ರಿಯಾಗಿದ್ದ ಅವಧಿಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಿ ಆಶ್ರಯ ಮನೆಗಳನ್ನು ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೂ ನಿವೇಶನ ರಹಿತರಿಗೆ ಮನೆ ನಿರ್ಮಿಸಿಲ್ಲ. ಇದರಿಂದ ನಿವೇಶನ ರಹಿತ ಕುಟುಂಬಗಳು ಹೆಚ್ಚಾಗಿವೆ. ಇವರಿಗೆ ನಿವೇಶನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರದ ಅಂಗ ಸಂಸ್ಥೆಯಾಗಿರುವ ದೂಡಾ ಜನರಿಗೆ ಸರಿಯಾದ ಮಾಹಿತಿ ನೀಡದೆ ಅರ್ಜಿಗಳನ್ನು ಪಡೆಯುತ್ತಿರುವುದಕ್ಕೆ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ. ಚಮನ್‍ಸಾ ಬ್, ಗಡಿಗುಡಾಳ್ ಮಂಜುನಾಥ್, ಆಶಾ ಉಮೇಶ್, ಮೀನಾಕ್ಷಿ ಜಗದೀಶ್, ಯುವರಾಜ್ ಮತ್ತಿತರರಿದ್ದರು

error: Content is protected !!