ಷೇರುದಾರರಿಗೆ ಶೇ.18 ಡಿವಿಡೆಂಡ್ : ಎಸ್ಸೆಸ್
ದಾವಣಗೆರೆ,ನ.21- ಕಳೆದ ಎರಡು ವರ್ಷಗಳಲ್ಲಿ ಕೆೋರೆೋನಾ ಸಂಕಷ್ಟದಿಂದ ಎಲ್ಲ ವ್ಯವಹಾರಗಳೂ ನಷ್ಟ ಅನುಭವಿಸಿವೆ ಅಂತಹದರಲ್ಲಿಯೂ ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ 5.97 ಕೋಟಿ ರೂ ನಿವ್ವಳ ಲಾಭ ಗಳಿಸಿ ರಾಜ್ಯದಲ್ಲಿಯೇ ಅತ್ಯುತ್ತಮ ಕೆಲಸ ಮಾಡುತ್ತಿರುವ ಮುಂಚೂಣಿ ಬ್ಯಾಂಕ್ ಆಗಿದೆ ಎಂದು ಬ್ಯಾಂಕಿನ ಅಧ್ಯಕ್ಷರೂ ಹಾಗು ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಹರ್ಷ ವ್ಯಕ್ತಪಡಿಸಿದರು.
ಬಿ.ಐ.ಇ.ಟಿ ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿಂದು ವರ್ಚ್ಯುಯಲ್ ಆಗಿ ಜರುಗಿದ ಬಾಪೂಜಿ ಬ್ಯಾಂಕಿನ 52ನೇ ವಾರ್ಷಿಕ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬ್ಯಾಂಕಿನ ಷೇರುದಾರರು, ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಬ್ಯಾಂಕ್ ಇಷ್ಟೊಂದು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಬ್ಯಾಂಕಿನ ಷೇರುದಾರರಿಗೆ ಶೇ.18ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.
ಬ್ಯಾಂಕ್ ಸದಸ್ಯರ ಮರಣ ಪರಿಹಾರ ನಿಧಿ ಈಗ 10 ಸಾವಿರ ಇದ್ದು, ಅದನ್ನು ಇನ್ನೂ ಹೆಚ್ಚು ಮಾಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂಬ ಇಂಗಿತವನ್ನು ಎಸ್. ಶಿವಶಂಕರಪ್ಪನವರು ವ್ಯಕ್ತಪಡಿಸಿದರು.
ಹಿರಿಯ ನಿರ್ದೇಶಕ ಡಾ. ಎಂ.ಜಿ.ಈಶ್ವರಪ್ಪನವರು, 2020-21 ಸಾಲಿನ ವಾರ್ಷಿಕ ವರದಿ ಮಂಡಿಸಿ, ಕಾರ್ಯಸೂಚಿ ದಾಖಲಿಸಿದರಲ್ಲದೇ ಹೆಚ್ಚುವರಿ ಖರ್ಚು ವೆಚ್ಚಗಳು ಮತ್ತು ನಿವ್ವಳ ಲಾಭದ ಹಂಚಿಕೆಗೆ ಮಹಾಸಭೆಯ ಒಪ್ಪಿಗೆ ಕೋರಿದರು.
ಮತ್ತೋರ್ವ ಹಿರಿಯ ನಿರ್ದೇಶಕ ಡಾ.ಬಿ.ಎಸ್. ರೆಡ್ದಿ ಅವರು ಮಾತನಾಡಿ, ಕಳೆದ 52 ವರ್ಷಗಳಲ್ಲಿ ಬ್ಯಾಂಕ್ ಅತ್ಯುತ್ತಮ ಸಾಧನೆ ಮಾಡಿದೆ. ಸಾಲಗಾರರಷ್ಟೇ ಜಾಮೀನುದಾ ರರಿಗೂ ಹೆೋಣೆಗಾರಿಕೆ ಇರುವುದರಿಂದ, ಜಾಮೀನು ನೀಡುವಾಗ ಸಾಲಗಾರ ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತಾನೆ ಅಲ್ಲದೇ ಸಾಲ ಮರುಪಾವತಿ ಸರಿಯಾಗಿ ಮಾಡುತ್ತಿದ್ದಾನೆಯೇ ಎಂಬುದನ್ನು ಗಮನಿಸಬೇಕು. ಹೀಗೆ ಜಾಮೀನು ದಾರರೂ ಕಾಳಜಿ ವಹಿಸಿದರೆ ಬ್ಯಾಂಕಿನ ಏಳಿಗೆಗೆ ಸಹಕಾರಿಯಾಗುತ್ತದೆ ಎಂದರು.
ಹಿರಿಯ ಮುತ್ಸದ್ದಿ ಡಾ.ಶಾಮನೂರು ಶಿವಶಂಕರಪ್ಪನವರು ಮತ್ತು ಐ.ಪಿ.ವಿಶ್ವಾರಾಧ್ಯರು ಬಾಪೂಜಿ ಬ್ಯಾಂಕನ್ನು ಹೆಮ್ಮರವಾಗಿ ಬೆಳೆಸಿದ್ದರೆ, ಮಾಜಿ ಸಚಿವರು ಬ್ಯಾಂಕಿನ ಉಪಾಧ್ಯಕ್ಷರೂ ಆದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಬ್ಯಾಂಕಿನ ಬೆಳವಣಿಗೆ ಮತ್ತು ಸ್ಥಿರತೆಗೆ ಕಾರಣೀಭೂತರಾಗಿದ್ದಾರೆ ಎಂದು ನಿರ್ದೇಶಕ ಡಾ.ಅರುಣ್ ಕುಮಾರ್ ನುಡಿದರು.
ಮಾಜಿ ಸಚಿವರೂ ಆದ ಉಪಾಧ್ಯಕ್ಷ ಎಸ್.ಎಸ್.ಮಲ್ಲಿಕಾರ್ಜುನ್, ನಿರ್ದೇಶಕರಾದ ಶಂಷಾದ್ ಬೇಗಂ, ಡಾ.ಹೆಚ್.ಶಿವಪ್ಪ, ಡಾ.ಪೂರ್ಣಿಮಾ, ಡಾ.ಕೆ.ಹನುಮಂತಪ್ಪ, ಡಾ. ಸಿ.ವೈ.ಸುದರ್ಶನ್, ಡಾ.ಎಂ.ಎಂ.ಲಿಂಗರಾಜ, ಕೆ.ಬೆೋಮ್ಮಣ್ಣ ಮತ್ತು ಕೆ.ಎಸ್. ವೀರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭಕ್ಕೆ ಸೌಮ್ಯ ಸಂಗಡಿಗರು ಪ್ರಾರ್ಥಿಸಿದರು. ನಿರ್ದೇಶಕರಾದ ಡಾ.ಅರುಣ್ ಕುಮಾರ್ ಸ್ವಾಗತಿಸಿದರು. ಕೆ.ಎಸ್.ವೀರೇಶ್ ವಂದಿಸಿದರು. ಪ್ರಧಾನ ವ್ಯವಸ್ಥಾಪಕ ಜಿ.ವಿ.ಶಿವಶಂಕರ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ವಯೋ ನಿವೃತ್ತಿ ಹೆೋಂದಿದ ಉದ್ಯೋಗಿಗಳಾದ ಎಂ. ಕೆೋಟ್ರೇಶ್, ಎಸ್. ಜಗದೀಶಪ್ಪ, ಕೆ. ಪಾಲಾಕ್ಷಪ್ಪ ಮತ್ತು ವಿ.ಎಸ್. ವೀರಬಸಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಅಲ್ಲದೇ ಕರ್ನಾಟಕ ರಾಜ್ಯ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಡೆಸಿದ ಬ್ಯಾಂಕಿಂಗ್ ಮ್ಯಾನೇಜ್ ಮೆಂಟ್ ಕೋರ್ಸಿನಲ್ಲಿ ಉತ್ತೀರ್ಣರಾದ ಬ್ಯಾಂಕ್ ಸಿಬ್ಬಂದಿಗಳಿಗೆ ಸರ್ಟಿಫಿಕೆಟ್ ನೀಡಿ ಗೌರವಿಸಲಾಯಿತು.
ಬ್ಯಾಂಕಿನ ಹಿರಿಯ ಸಲಹೆಗಾರರಾದ ಡಿ.ವಿ.ರವೀಂದ್ರ ಮತ್ತು ಎಸ್.ಕಲ್ಲಪ್ಪ, ಶಾಖಾ ವ್ಯವಸ್ಥಾಪಕರುಗಳಾದ ಜಿ.ಓ.ಶಂಕರಪ್ಪ, ಬಿ.ಜಿ.ಬಸವರಾಜಪ್ಪ, ಎಂ.ಬಸವರಾಜ್, ಶೋಭಾ ಪಾಟೀಲ್, ಕೆ.ಎಂ.ಲಿಂಗೇಶ್, ಡಿ.ಜಿ.ರವಿ ಶಂಕರ್,ಜಿ.ಬಿ.ಮಂಜುನಾಥ ಪಾಟೀಲ್, ಎಂ.ಎಸ್.ಪ್ರಸನ್ನ ಮತ್ತು ಪಿ.ಎಸ್.ರವೀಂದ್ರ ಹಾಜರಿದ್ದರು. ಸೌಮ್ಯ ಮತ್ತು ಕೆೋಟ್ರಮ್ಮ ಗೀತಗಾಯನ ನಡೆಸಿಕೆೋಟ್ಟರು.