ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಿ : ಎಸ್ಸೆಸ್

ದಾವಣಗೆರೆ, ಮಾ.26-  ಇದೇ 29 ರಂದು 20ನೇ ವಾರ್ಡ್‌ಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಜಗದೀಶ್ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರು ಮತದಾರರಿಗೆ ಕರೆ ನೀಡಿದರು. ಶುಕ್ರವಾರ ಬೆಳಿಗ್ಗೆ ಭಾರತ್ ಕಾಲೋನಿ, ಹೆಚ್ ಕೆ.ಆರ್.ನಗರ, ಅಣ್ಣಾ ನಗರ ಸೇರಿದಂತೆ ವಾರ್ಡ್‍ನ ಎಲ್ಲಾ ಭಾಗಗಳಲ್ಲಿ ಸ್ಥಳೀಯ ಮುಖಂಡರೊಂದಿಗೆ ರೋಡ್ ಷೋ ನಡೆಸಿ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿಗರ ಅಧಿಕಾರದ ದುರಾಸೆಯಿಂದ ಮತ್ತೆ ಚುನಾವಣೆ ಬಂದಿದೆ. ಈ ಉಪಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಿನ ಮೂಲಕ ಗೆಲ್ಲಿಸಬೇಕೆಂದು ಕರೆ ನೀಡಿದರು.

ಬಿಜೆಪಿ ಪಕ್ಷದವರ ಅಧಿಕಾರ ದಾಹದಿಂದ ದೇಶ ಮತ್ತು ರಾಜ್ಯಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲೂ ಇಂದು ಉಪಚುನಾವಣೆ ಎದುರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಇರುವುದರಿಂದ ಕಳೆದ ಬಾರಿ ಪಕ್ಷದ ಅಭ್ಯರ್ಥಿಗೆ 2ನೇ ದೊಡ್ಡ ಜಯಭೇರಿ ನೀಡಿದ್ದ ಈ ವಾರ್ಡಿನ ಜನತೆ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಠೇವಣಿ ಸಿಗದಂತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು.

ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಅಭಿವೃದ್ಧಿ ಚಿಂತನೆ ಮಾಡಲಿದೆ ಎಂಬುದಕ್ಕೆ ಕಳೆದ 7 ವರುಷಗಳ ದುರಾಡಳಿತ ನೋಡಿರುವ ಜನತೆ ಸರ್ಕಾರದ ಜನ ವಿರೋಧಿ ನೀತಿಗಳಿಂದ ಬೇಸತ್ತು ಬೀದಿಗಿಳಿದು ಹೋರಾಟ ನಡೆಸುತ್ತಿರುವುದೇ ಸಾಕ್ಷಿ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ಈ ವಾರ್ಡಿನ ಎಲ್ಲರ ಆಶಯದಂತೆ ನೀವೇ ಹೇಳಿದ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿದ್ದು, ತಾವುಗಳು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಸ್ವಾಭಿಮಾನದ ಸಂಕೇತವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ಜಗದೀಶ್ ಮಾತನಾಡಿ ಈ ಭಾಗದ ಜನರು ಸ್ವಾಭಿಮಾನದ ಪ್ರತೀಕವಾಗಿದ್ದು, ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಹೆಚ್.ಓಬಳಪ್ಪ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ಜಿ.ಎಸ್. ಮಂಜುನಾಥ್, ಕೆ.ಚಮನ್‍ಸಾಬ್, ಪಾಮೇನಹಳ್ಳಿ ನಾಗರಾಜ್, ಜಿ.ಡಿ.ಪ್ರಕಾಶ್, ಜಾಕೀರ್, ಕಲ್ಲಹಳ್ಳಿ ನಾಗರಾಜ್,  ಸೈಯದ್ ಚಾರ್ಲಿ, ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಶಿವಲೀಲಾ ಕೊಟ್ರಯ್ಯ, ಆಶಾ ಉಮೇಶ್, ಮಾಜಿ ಸದಸ್ಯ ಬಸಪ್ಪ,  ಉದ್ಯಮಿ ಕೋಗುಂಡಿ ಬಕ್ಕೇಶಪ್ಪ ಎಪಿಎಂಸಿ ಸದಸ್ಯರಾದ ಮುದೇಗೌಡ್ರು ಗಿರೀಶ್, ದೊಗ್ಗಳ್ಳಿ ಬಸವರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ಸುಷ್ಮಾ ಪಾಟೀಲ್, ಅನ್ನಪೂರ್ಣಮ್ಮ, ಬಸಾಪುರ ಕೊಟ್ರಯ್ಯ, ನಗರಸಭೆ ಮಾಜಿ ಅಧ್ಯಕ್ಷ ಎಂ.ಮಂಜುನಾಥ್, ಸ್ಥಳೀಯ ಮುಖಂಡರುಗಳಾದ ವೆಂಕಟೇಶ್ ನಾಯ್ಕ, ಸೊಸೈಟಿ ವೆಂಕಟೇಶನಾಯ್ಕ, ಟಿ.ಡಿ.ಹಾಲೇಶ್, ರಾಕಿ, ರಘು, ಚಂದ್ರು, ದುಗ್ಗೇಶ್, ಅಲೆಕ್ಸಾಂಡರ್(ಜಾನು), ಮುನಿಸ್ವಾಮಿ, ವೀರೇಶ್, ರಾಜಶೇಖರ್ ಬೆಂಡಿಗೇರಿ, ದಾದು, ಮಾದೇಶಣ್ಣ, ಪೆರುಮಾಳ್, ಸಾವನ್, ದಾದಾಪೀರ್ ಮತ್ತಿತರರಿದ್ದರು.

error: Content is protected !!