ಕಂಡ ಕನಸನ್ನು ನನಸಾಗಿಸುವ ಛಲ ಬೆಳೆಸಿಕೊಳ್ಳಿ: ಬೀಳಗಿ

ದಾವಣಗೆರೆ, ಮಾ. 24- ಪ್ರತಿ  ವಿದ್ಯಾರ್ಥಿ ಮಹತ್ವಾಕಾಂಕ್ಷೆಯ ಕನಸು ಕಾಣಬೇಕು, ಆ ಕನಸನ್ನು ನನಸು ಮಾಡುವ  ಛಲ ಬೆಳೆಸಿಕೊಳ್ಳ ಬೇಕು. ಗುರಿ ತಲುಪುವವರೆಗೂ ಯಾರೂ ವಿರಮಿ ಸಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 ಎಸ್‍ಎಸ್‍ಎಲ್‍ಸಿ, ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ-ಮಲ್ಲಿಗೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಕನಸು ಬಿತ್ತುವ ಕೆಲಸ-ರಾಷ್ಟ್ರ ಕಟ್ಟುವ ಕೆಲಸ’ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಪ್ರತಿಯೊಬ್ಬರಲ್ಲೂ ಅಗಾಧ ಶಕ್ತಿ ಇರುತ್ತದೆ, ಕಷ್ಟ ಪಡುವವರೇ ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ.  16 ರಿಂದ 22 ರೊಳಗಿನ ವಯಸ್ಸು ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳುವ ಪರಿಪಕ್ವವಾದ ಅವಧಿ ಎಂದು ಹೇಳಿದರು.

ನಕಾರಾತ್ಮಕ ಭಾವನೆ ಹೊಂದುವುದು ಒಳ್ಳೆಯದಲ್ಲ, ಆದಷ್ಟು ಧನಾತ್ಮಕವಾಗಿ ಚಿಂತಿಸಿ.  ಬದಲಾವಣೆ ಜಗದ ನಿಯಮ, ಹೀಗಾಗಿ ಕಲಿಕಾ ಮಟ್ಟದಲ್ಲಿ ಸಾಮರ್ಥ್ಯ ಕಡಿಮೆ ಇರುವವರು ಕೀಳರಿಮೆ ಹೊಂದಬಾರದು. ಜೀವನವನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.

Click here to change this text

error: Content is protected !!