ಲೋಕಸೇವಾ ಆಯೋಗದ ಸದಸ್ಯರಾಗಿ ಡಾ. ಶಾಂತ ಹೊಸಮನಿ ಪುರುಷೋತ್ತಮ್‌

ಲೋಕಸೇವಾ ಆಯೋಗದ ಸದಸ್ಯರಾಗಿ ಡಾ. ಶಾಂತ ಹೊಸಮನಿ ಪುರುಷೋತ್ತಮ್‌ - Janathavaniದಾವಣಗೆರೆ, ಜೂ.24- ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆ ರಕ್ತನಿಧಿ ವೈದ್ಯಾಧಿಕಾರಿ ಡಾ. ಶಾಂತ ಹೊಸಮನಿ ಅವರನ್ನು ನೇಮಕ ಮಾಡಿ, ರಾಜ್ಯಪಾಲ ವಜುಭಾಯಿ ವಾಲಾ ಅವರು ಮೊನ್ನೆ ಆದೇಶ ಹೊರಡಿಸಿದ್ದಾರೆ.

ಆಯೋಗದಲ್ಲಿ ಖಾಲಿ ಉಳಿದಿದ್ದ ಎರಡು ಸದಸ್ಯರ ಸ್ಥಾನಗಳಿಗೆ ಅಧಿಕಾರಿ ವಿಭಾಗದಿಂದ ಡಾ. ಶಾಂತ ಮತ್ತು ಅಧಿ ಕಾರೇತರ ವಿಭಾಗದಿಂದ ಬೆಂಗಳೂರಿನ ರಾಜಾಜಿನಗರದ ಡಾ. ಹೆಚ್.ಎಸ್. ನರೇಂದ್ರ ಅವರುಗಳು ನೇಮಕಗೊಂಡಿದ್ದಾರೆ.

ಈವರೆಗೂ ಸದಸ್ಯರಾಗಿದ್ದ ಶಿವಶಂಕರ್ ಸಾಹುಕಾರ್ ಅವರು ಕೆಪಿಎಸ್ ಇ ಅಧ್ಯಕ್ಷ ರಾಗಿದ್ದರೆ, ಎಸ್.ಹೆಚ್. ದುಗ್ಗಪ್ಪ ಅವರು ಕಳೆದ ಮಾಹೆಯಲ್ಲಿ ನಿವೃತ್ತರಾದ ಕಾರಣ, ಎರಡು ಸ್ಥಾನಗಳು ಖಾಲಿ ಉಳಿದಿದ್ದವು.   

ಡಾ. ಶಾಂತ ಸಂಕ್ಷಿಪ್ತ ಪರಿಚಯ : ಬೆಳಗಾವಿ ಜಿಲ್ಲೆಯವರಾದ ಡಾ. ಶಾಂತ ಹೊಸಮನಿ ಬಿ.ಎಸ್ಸಿ, ಎಂ.ಬಿ.ಬಿ.ಎಸ್‌., ಎಂ.ಡಿ. ಪೇಥಾ ಲಜಿ ಪದವೀಧರರಾಗಿದ್ದಾರೆ. ನಗ ರದ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಬಿ.ಎಸ್. ಪುರುಷೋ ತ್ತಮ್ ಅವರ ಧರ್ಮಪತ್ನಿ.  

ಸ್ಥಳೀಯ ಗಾಂಧಿನಗರದವ ರಾದ  ಸ್ವಾತಂತ್ರ್ಯ ಹೋರಾಟ ಗಾರರೂ, ನಿವೃತ್ತ ಮುಖ್ಯೋಪಾಧ್ಯಾಯರೂ  ಆಗಿದ್ದ ಭೈರಜ್ಜರ ಶಾಮಪ್ಪ ಮೇಸ್ಟ್ರು ಚಳಕೇರಿ ಅವರ ಕಿರಿಯ ಪುತ್ರ ಬಿ.ಎಸ್‌. ಪುರುಷೋತ್ತಮ್‌ ಅವರೊಂದಿಗೆ 1994 ರಲ್ಲಿ ವಿವಾಹವಾದ ಡಾ. ಶಾಂತ  ಅವರು 2010 – 2013ರ ಸಾಲಿನಲ್ಲಿ ದಾವಣಗೆರೆಯ ಜಜಮು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೆಥಾಲಜಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಹರಿಹರ ತಾಲ್ಲೂಕು ಕೊಂಡಜ್ಜಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದಾವಣಗೆರೆ ತಾಲ್ಲೂಕಿನ ಹೊನ್ನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ. ಶಾಂತ ಹೊಸಮನಿ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇದೀಗ ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆಯ ರಕ್ತನಿಧಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಭಿನಂದನೆ: ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡಿರುವ ಡಾ. ಶಾಂತ ಹೊಸಮನಿ ಅವರನ್ನು ಹಿರಿಯ ಸಾಹಿತಿ ಶ್ರೀಮತಿ ಬಿ.ಟಿ. ಜಾಹ್ನವಿ ಅಭಿನಂದಿಸಿದ್ದಾರೆ.

error: Content is protected !!