ಹರಿಹರ, ಜೂ.22- ಜಿ.ಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಟ್ರಸ್ಟ್ ವತಿಯಿಂದ 1.80 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡಲುದ್ದೇಶಿಸಿರುವ ಮೂರು ಆಮ್ಲಜನಕ ಜನರೇಟರ್ಗಳ ಪೈಕಿ 330 ಲೀ/ಮಿನಿಟ್ ಸಾಮರ್ಥ್ಯದ ಮೊದಲ ಆಮ್ಲಜನಕ ಜನರೇಟರನ್ನು ಮಂಗಳವಾರ ನಗರಕ್ಕೆ ತರಲಾಯಿತು.
ಈಗಾಗಲೇ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣ ದಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಜನರೇಟರ್ ಜೋಡಿಸುವ ಕಾರ್ಯ ಒಂದೆರಡು ದಿನಗಳಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಸಂಸದ ಜಿ.ಎಂ.ಸಿದ್ದೇಶ್ವರ ಹರಿಹರದ ಆಸ್ಪತ್ರೆ ಆವರಣಕ್ಕೆ ತೆರಳಿ ನೂತನ ಜನರೇಟರ್ ವೀಕ್ಷಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ಜಿ.ಎಲ್.ರಾಜೀವ್, ಆಸ್ಪ ತ್ರೆಯ ವೈದ್ಯಾಧಿಕಾರಿಗಳು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಇತರರು ಉಪಸ್ಥಿತರಿದ್ದರು.