ಜಿಲ್ಲೆಯಲ್ಲಿ ಚುರುಕುಗೊಂಡ ಬಿತ್ತನೆ

2,43,698  ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ, 21,638 ಹೆಕ್ಟೇರ್ ಬಿತ್ತನೆ

ದಾವಣಗೆರೆ, ಜು.17-  ಜಿಲ್ಲೆಯಲ್ಲಿ ಉತ್ತಮ ಮಳೆ ಬೀಳುತ್ತಿದ್ದಂತೆ ಮುಂಗಾರು ಹಂಗಾಮಿನ ಬಿತ್ತನೆ ಚುರುಕುಗೊಂಡಿದೆ. 

88,002 ಹೆಕ್ಟೇರ್ ನೀರಾವರಿ ಪ್ರದೇಶ ಹಾಗೂ 1,55,696 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ  ಸೇರಿ ಜಿಲ್ಲೆಯಲ್ಲಿ ಒಟ್ಟಾರೆ  2,43,698  ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

 ಜು.16ನೇ ತಾರೀಖಿನ ಮಾಹಿತಿಯಂತೆ ಮಳೆಯಾಶ್ರಿತ 19,413 ಹೆ.ಪ್ರದೇಶ ಸೇರಿ ಜಿಲ್ಲೆಯಲ್ಲಿ ಈಗಾಗಲೇ 21,638 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಮುಸುಕಿನ ಜೋಳದ ನಡುವೆ ಅಂತರ ಬೆಳೆಯಾಗಿ ತೊಗರಿ ಬೆಳೆಯಲು ಬಹುತೇಕ ರೈತರು ಮುಂದೆ ಬಂದಿರುವುದು ಈ ವರ್ಷದ ವಿಶೇಷ. ಹೀಗಾಗಿ ಈ ವರ್ಷ ತೊಗರಿ ಬಿತ್ತನೆ ಆಶಾದಾಯಕವಾಗಲಿದೆ ಎನ್ನುವುದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಅವರ ಅಭಿಪ್ರಾಯ.

ದಾವಣಗೆರೆ ತಾಲ್ಲೂಕಿಗೆ ನಿಗದಿಯಾಗಿದ್ದ ಬಿತ್ತನೆ 63404 ಹೆಕ್ಟೇರ್ ಪ್ರದೇಶದ ಪೈಕಿ 3445 ಹೆಕ್ಟೇರ್ ಬಿತ್ತನೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ  32000 ಹೆಕ್ಟೇರ್ ಗುರಿ ಪೈಕಿ 1856 ಹೆಕ್ಟೇರ್, ಜಗಳೂರು 54000 ಹೆ.ಪೈಕಿ 6466,  ಹೊನ್ನಾಳಿ 27990 ಹೆಕ್ಟೇರ್ ಪೈಕಿ 2943,  ಚನ್ನಗಿರಿ 45309 ಹೆ.ಪೈಕಿ 4125,  ಹಾಗೂ ನ್ಯಾಮತಿ ತಾಲ್ಲೂಕಿಗೆ 20995 ಹೆಕ್ಚೇರ್ ಬಿತ್ತನೆಗೆ ಗುರಿಯ ಪೈಕಿ 2803 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಪ್ರಸಕ್ತ ವರ್ಷದಲ್ಲಿ ಜಿಲ್ಲೆಗೆ ಭತ್ತ 65847, ಜೋಳ, 2400, ರಾಗಿ 7295, ಮೆಕ್ಕೆಜೋಳ 126108, ಬಾಜ್ರಾ 580 ಹಾಗೂ ಸಿರಿ ಧಾನ್ಯ 830 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ. 7265 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 1248 ಹೆ. ಅಲಸಂದೆ, 1152 ಹೆ. ಅವರೆ  ಹಾಗೂ ವಿವಿಧ ರೀತಿಯ ದ್ವಿದಳ ಧಾನ್ಯಗಳಿಗೆ 10684 ಹೆಕ್ಟೇರ್ ಗುರಿ ಹೊಂದಲಾಗಿದೆ.

13820 ಹೆಕ್ಟೇರ್ ಶೇಂಗಾ, 2190 ಹೆ. ಸೂರ್ಯಕಾಂತಿ ಸೇರಿ 17356 ಹೆ.ನಲ್ಲಿ ಎಣ್ಣೆ ಕಾಳುಗಳನ್ನು ಹಾಗೂ 10427 ಹೆ.ನಲ್ಲಿ ಹತ್ತಿ ಬೆಳೆಯುವ ಗುರಿ ಇದೆ. ನಿಗದಿತ ಗುರಿಯ ಪೈಕಿ ಈಗಾಗಲೇ ಜಿಲ್ಲೆಯಲ್ಲಿ 17865 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 1106 ಹೆ. ಹತ್ತಿ 648 ಹೆ. ಶೇಂಗಾ, 861 ಹೆ.ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.

ವಾಡಿಕೆಗಿಂತ ಹೆಚ್ಚು ಮಳೆ: ಕಳೆದ ಜನವರಿ 1 ರಿಂದ ಜೂನ್ 16ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.52ರಷ್ಟು ಹೆಚ್ಚು ಮಳೆಯಾಗಿದೆ. ಜೂನ್ 1ರಿಂದ 16ರವರೆಗೆ  ಜಿಲ್ಲೆಯಲ್ಲಿ 44.7 ಮಿ.ಮೀ. ವಾಡಿಕೆ ಮಳೆಗೆ 46.8 ಮಿ.ಮೀ. ಮಳೆಯಾಗಿದ್ದು, ಶೇ.5ರಷ್ಟು ಹೆಚ್ಚು ಮಳೆಯಾಗಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 51.7 ಮಿ.ಮೀ. ವಾಡಿಕೆ ಮಳೆಗೆ 40.2 ಮಿ.ಮೀ., ದಾವಣಗೆರೆ 43.7 ವಾಡಿಕೆ ಮಳೆಗೆ 43.6 ಮಿ.ಮೀ., ಹರಿಹರ 38.6 ಮಿ.ಮೀ. ವಾಡಿಕೆಗೆ 48.4 ಮಿ.ಮೀ., ಹೊನ್ನಾಳಿ 47.6 ವಾಡಿಕೆಗೆ 42.4ಿ ಮಿ.ಮೀ., ಜಗಳೂರು 33.9 ಮಿ.ಮೀ. ವಾಡಿಕೆ ಮಳೆಗೆ 58.6 ಮಿ.ಮೀ. ಮಳೆ ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 60.6 ವಾಡಿಕೆ ಮಳೆಗೆ 48.5ರಷ್ಟು ವಾಸ್ತವ ಮಳೆಯಾಗಿದೆ. ಚನ್ನಗಿರಿಯಲ್ಲಿ ಶೇ.22 ಹಾಗೂ ನ್ಯಾಮತಿಯಲ್ಲಿ ಶೇ.20ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ ಜಗಳೂರು ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ.73ರಷ್ಟು ಹೆಚ್ಚು ಮಳೆಯಾಗಿದೆ.

error: Content is protected !!