ದೇವರಾಜ ಅರಸು ಹಿಂದುಳಿದ ಅಭಿವೃದ್ದಿ ನಿಗಮದ ಅಧ್ಯಕ್ಷ ರಘು ಆರ್. ಕೌಟಿಲ್ಯ
ದಾವಣಗೆರೆ, ಮಾ.5- ಮಡಿವಾಳ ಸಮುದಾಯವನ್ನು ಎಸ್‍ಸಿ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅತ್ಯಂತ ಜಾಣ್ಮೆ, ತಂತ್ರಜ್ಞಾನದಿಂದ, ವ್ಯವಸ್ಥಿತವಾಗಿ ನಾವುಗಳು ರಾಜಕೀಯ ಲಾಬಿ ನಡೆಸಿ ಪಡೆದುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಮಡಿವಾಳ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಲಿದೆ ಎಂದು ರಾಜ್ಯದ ಶ್ರೀ ದೇವರಾಜ ಅರಸು ಹಿಂದುಳಿದ ಅಭಿವೃದ್ದಿ ನಿಗಮದ ಅಧ್ಯಕ್ಷ ರಘು ಆರ್. ಕೌಟಿಲ್ಯ ಹೇಳಿದರು.
ವಿನೋಬನಗರದ ಮಡಿವಾಳ ಮಾಚಿದೇವ ಸಮು ದಾಯ ಭವನದಲ್ಲಿ ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದಿಂದ ಆಯೋಜಿಸಲಾಗಿದ್ದ ಅಭಿನಂ ದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆನ್ನುವ ಕೂಗಿಗೆ ದನಿಕೊಟ್ಟಂತಹ ಒಬ್ಬನೇ ನಾಯಕ ಅದು ಯಡಿಯೂರಪ್ಪ. ಡಾ. ಅನ್ನಪೂರ್ಣಮ್ಮ ವರದಿ, ಕುಲಶಾಸ್ತ್ರ ಅಧ್ಯಯನದ ವರದಿ ಸಿದ್ದಪಡಿಸಲಾ ಗಿದೆ. ಕುಲಶಾಸ್ತ್ರ ಅಧ್ಯಯನ ಮಾಡಿಸಿದ ಮೇಲೆ ಮುಖ್ಯಮಂತ್ರಿಗಳಿಗೆ ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸ ಬೇಕೆನ್ನುವ ಮನಸ್ಸಿದೆ ಎಂದರ್ಥ ಎಂದರು.
ನಾವೆಲ್ಲರೂ ಸಂಘಟಿತರಾಗಿ ರಾಜಕೀಯ ಪ್ರಜ್ಞೆ ಮೂಡಿಸಿಕೊಳ್ಳಬೇಕೆಂದರು.
ದೇವರಾಜ ಅರಸು ಅಂತಹವರು ನಮಗೆ ಮೀಸಲಾತಿ ಒದಗಿಸಿದ ಮಹಾನ್ ವ್ಯಕ್ತಿ. ಇನ್ನು ಮುಂದೆ ಮಡಿವಾಳ ಸಮುದಾಯದಿಂದ ಯಾವುದೇ ಕಾರ್ಯಕ್ರಮಗಳಾಗಲೀ, ಮಾಚಿದೇವರ ಫೋಟೊ ಜೊತೆಯಲ್ಲಿ ದೇವರಾಜ ಅರಸು ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಬಳಸೋಣ ಎಂದು ಕರೆ ನೀಡಿದರು.
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷ ಎಂ. ಅಪ್ಪಣ್ಣ, ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿದರು.
ಅಂಬರ್‍ಕರ್ ಜಯಪ್ರಕಾಶ್, ಸಮಾಜದ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ, ಎಂ.ಎನ್. ನಾಗರಾಜ್, ಹೆಚ್.ಜಿ. ಉಮೇಶ್, ಹುಲಿಕಟ್ಟೆ ರಾಮಚಂದ್ರಪ್ಪ, ಎಂ.ಹೆಚ್. ಭೀಮಣ್ಣ, ರಮೇಶ್, ನಾಗಮ್ಮ, ಓಂಕಾರಪ್ಪ, ಅಡಿವೆಪ್ಪ, ಡೈಮಂಡ್ ಮಂಜುನಾಥ್, ಧನಂಜಯ, ಸುರೇಶ್ ಕೋಗುಂಡೆ ಮತ್ತಿತರರು ಉಪಸ್ಥಿತರಿದ್ದರು.