ಪೌರಾಯುಕ್ತೆ ಎಸ್.ಲಕ್ಷ್ಮಿ
ಹರಿಹರ, ಅ.31- ಪುಸ್ತಕ ಎನ್ನುವುದು ನಮ್ಮ ಭವಿಷ್ಯವನ್ನು ರೂಪಿಸುವ ಶಕ್ತಿ ಭಂಡಾರವಿದ್ದಂತೆ, ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಪೌರಾಯುಕ್ತೆ ಎಸ್.ಲಕ್ಷ್ಮಿ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಎಸ್.ಜೆ.ವಿ.ಪಿ. ಕಾಲೇಜು ಸಭಾಂಗಣದಲ್ಲಿ ಎನ್.ಎಚ್. ಶ್ರೀನಿವಾಸ್ ಸ್ನೇಹ ಬಳಗದಿಂದ ಆಯೋಜಿಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪುಸ್ತಕಗಳನ್ನು ತಮಗೆ ಸಮಯ ಸಿಕ್ಕಾಗಲೆಲ್ಲಾ ಅಭ್ಯಾಸ ಮಾಡಿಕೊಳ್ಳಬೇಕು. ನಿಮ್ಮ ಕಾಲೇಜು ವಿದ್ಯಾಭ್ಯಾಸದ ಜೊತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅಭ್ಯಾಸ ಮಾಡಿ ಕೊಂಡು ಪ್ರಯತ್ನಗಳನ್ನು ಮಾಡುತ್ತಿರ ಬೇಕು. ಆಗ ಯಶಸ್ಸುಗಳಿಸಲು ಸಾಧ್ಯ. ಅನೇಕ ಆಯ್ಕೆಗಳನ್ನು ಇಟ್ಟುಕೊಳ್ಳದೆ 1 ಅಥವಾ 2 ಆಯ್ಕೆಗಳಿದ್ದರೆ, ಸುಲಭವಾಗಿ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ. ಕಾಲೇಜು ಅಥವಾ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದಿನ ವಿಷಯದ ಜೊತೆಗೆ ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಪಡೆದು ಅಭ್ಯಾಸ ಮಾಡಬೇಕು. ಜೊತೆಗೆ ನಿಮ್ಮ ಓದಿನ ಕಡೆಗೆ ಹೆಚ್ಚು ಗಮನ ಹರಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ದೇಶಕ್ಕಾಗಿ ತಮ್ಮ ಸೇವೆಯನ್ನು ಸಲ್ಲಿಸಿರುವ ಮಹನೀಯರಾದ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರಂತಹ ಮಹನೀಯರುಗಳ ಪುಸ್ತಕಗಳನ್ನು ಅಭ್ಯಸಿ ಸಿದಾಗ ಮನಸ್ಸು ಶಾಂತವಾಗಿ ಹೆಚ್ಚಿನ ಅಧ್ಯಯನ ಮಾಡಲು ಸಹಕಾರಿಯಾಗು ತ್ತದೆ. ನಿಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಂಶುಪಾಲ ಎಸ್.ಎಚ್.ಪ್ಯಾಟಿ ಮಾತನಾಡಿ, ಈ ಹಿಂದೆ ಇದ್ದಂತಹ ಮನಿ ಪವರ್, ಮ್ಯಾನ್ ಪವರ್, ಮಸಲ್ ಪವರ್ಗಳೆಲ್ಲ ಇಂದು ಶೂನ್ಯವಾಗಿದ್ದು, ಈಗ ಏನಿದ್ದರೂ ಮಾಹಿತಿ ಪವರ್ (ಇನ್ಫಾರ್ಮೇಶನ್ ಪವರ್) ಮಾತ್ರ ಅವಶ್ಯವಾಗಿದ್ದು, ಇದರಿಂದ ದೇಶ-ವಿದೇಶಗಳಲ್ಲಿ ಕೆಲಸ ನಿರ್ವಹಿಸಬಹು ದಾಗಿದೆ. ಇಂದಿನ ವಿದ್ಯಾರ್ಥಿ ಪೀಳಿಗೆಯು ತಮ್ಮ ತಮ್ಮ ವೈಫಲ್ಯಗಳನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡಿವೆ. ಯಾವುದ ರಲ್ಲೇ ಆಗಲಿ ವಿಫಲವಾದಾಗ ಆತ್ಮಹತ್ಯೆ ಯಂತಹ ಕೃತ್ಯಕ್ಕೆ ಮೊರೆ ಹೋಗುವ ಮಟ್ಟಕ್ಕೆ ಬಂದು ನಿಂತಿವೆ. ಆದ್ದರಿಂದ ತಮ್ಮ ವೈಫಲ್ಯಗಳನ್ನು ಎದುರಿಸಿ, ಮುಂದಿನ ಯಶ ಸ್ಸಿಗೆ ದಾರಿ ಮಾಡಿಕೊಳ್ಳುವಂತಹ ಆತ್ಮ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಸದಸ್ಯ ಶಂಕರ್ ಖಟಾವಕರ್ ಮಾತನಾಡಿ, ಎನ್.ಎಚ್.ಶ್ರೀನಿವಾಸ್ ಬಳಗದವರು ಕೋವಿಡ್ ಸಂದರ್ಭದಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅವರು ಯಾವುದೇ ಜಾತಿ, ಧರ್ಮ, ಮತ, ಲಿಂಗ ಭೇದವಿಲ್ಲದೆ ಎಲ್ಲಾ ರೀತಿಯ ಬಡವರು ಮತ್ತು ಅವಶ್ಯಕತೆ ಇದ್ದ ಎಲ್ಲರಿಗೂ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಅದರಂತೆ ಈಗ ತಾಲ್ಲೂಕಿನ ಬಡ ವಿದ್ಯಾರ್ಥಿಗಳ ಏಳಿಗೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿ ಸಲು ತರಬೇತಿ ಕಾರ್ಯಾಗಾರ ಪ್ರಾರಂಭಿ ಸಿದ್ದಾರೆ. ತಾಲ್ಲೂಕಿನ ಎಲ್ಲಾ ಅರ್ಹ ವಿದ್ಯಾ ರ್ಥಿಗಳು ಇದರ ಲಾಭ ಪಡೆದು ಮುಂದೆ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿ, ಹುಟ್ಟೂರಿನ ಅಭಿವೃದ್ಧಿಗೆ ಸಹಕರಿಸುವಂತಾ ಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀನಿವಾಸ್, ನಮ್ಮೆಲ್ಲ ಮಿತ್ರರುಗಳೊಂದಿಗೆ ಕೆಲ ವಿಚಾರವಾಗಿ ಚರ್ಚಿಸಿ, ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳು ತರಬೇತಿಯನ್ನು ಆಯೋಜನೆ ಮಾಡಲಾಗಿರುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಉಚಿತ ಎಂದು ದುರ್ಲಾಭ ಪಡೆಯದೇ ಶ್ರದ್ಧೆಯಿಂದ ಅಭ್ಯಸಿಸಿ ಯಶಸ್ಸು ಹೊಂದವಂತಾಗಲಿ ಎಂದು ಹೇಳಿ, ಇಂದಿನ ಕಾರ್ಯಾಗಾರದಲ್ಲಿ 180 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಯುವನಟ ಪುನೀತ್ ರಾಜಕುಮಾರ್ರವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕೆ.ಗೀತಾ ಸ್ವಾಗತಿಸಿದರು. ಬಿ.ಡಿ.ಮಹೇಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಬಿ.ರೇವಣ್ಣ ನಾಯಕ್ ನಿರೂಪಿಸಿ, ವಂದಿಸಿದರು.
ಈ ಸಮಯದಲ್ಲಿ ಎಲ್ಐಸಿ ಮಂಜು ನಾಥ್, ಪ್ರಕಾಶ್, ಆರ್.ರಾಘವೇಂದ್ರ, ಗ್ರಾ.ಪಂ.ಸದಸ್ಯ ನಾಗೇಂದ್ರಪ್ಪ, ನಿವೃತ್ತ ಪ್ರಾಂಶುಪಾಲ ಸಿದ್ದಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್, ಸ್ನೇಹ ಬಳಗದ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.