`ಮುತ್ತಿನ ರಾಶಿ ಮೂರು ಪಾಲಾದೀತಲೇ ಪರಾಕ್’

`ಮುತ್ತಿನ ರಾಶಿ ಮೂರು ಪಾಲಾದೀತಲೇ ಪರಾಕ್' - Janathavaniಹೂವಿನಹಡಗಲಿ, ಮಾ.1- ತಾಲ್ಲೂಕಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರಣಿಕೋತ್ಸವವು ಇಂದು ಡೆಂಕನ ಮರಡಿಯಲ್ಲಿ ಸಂಜೆ 5.15 ಕ್ಕೆ ಸರಿಯಾಗಿ ಜರುಗಿತು. ಪ್ರತಿವರ್ಷ ಕಾರಣಿಕ ನುಡಿಯುವ ಗೊರವಯ್ಯ ರಾಮಣ್ಣ 15 ಅಡಿ ಎತ್ತರದ ಬಿಲ್ಲ (ಕಬ್ಬಿಣದ ಕಂಬ) ನ್ನೇರಿ ಸದ್ದಲೇ ಎಂದಾಗ ನೆರೆದಿದ್ದ ಲಕ್ಷಾಂತರ ಜನ ಒಂದು ಕ್ಷಣ ಮೌನಕ್ಕೊಳ ಗಾಗುತ್ತಿದ್ದಂತೆ `ಮುತ್ತಿನ ರಾಶಿ ಮೂರು ಪಾಲಾದೀತಲೇ ಪರಾಕ್’ ಎಂದು ಹೇಳಿ ಮೇಲಿನಿಂದ ಕೆಳಕ್ಕೆ ಬೀಳುತ್ತಿದ್ದಂತೆ ಭಕ್ತರು ಕಂಬಳಿ ಯನ್ನಿಡಿದು ರಕ್ಷಿಸಿದ ಪ್ರಸಂಗ ಮೈಲಾರದಲ್ಲಿಂದು ಜರುಗಿತು. 

ವಿಶ್ಲೇಷಣೆ : ಪ್ರತಿ ವರ್ಷದಂತೆ ಒಡೆದು ಹೋಳಾಗಬಹುದು. ರೈತರು ಬೆಳೆದ ಬೆಳೆಗೆ ಸರಿ ಯಾದ ರೀತಿಯ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕ ಬಹುದು. ಒಗ್ಗಟ್ಟು ಛಿದ್ರವಾಗಿ ಅಸಮಾಧಾನ ಉಂ ಟಾಗಬಹುದು. ಅತವೃಷ್ಟಿ-ಅನಾರೋಗ್ಯ ಸಂಭವಿ ಸುವ ಸಾಧ್ಯತೆ ಇದೆ ಎಂಬುದಾಗಿ ಕಾರಣಿಕೋತ್ಸವದ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ವಿಶ್ಲೇಷಿಸಿದರು. 

ರಾಜಕೀಯವಾಗಿ ಗಮನಿಸಿದರೆ, ಮುಂಬ ರುವ ಚುನಾವಣೆ ಯಲ್ಲಾಗಲೀ ಅಥವಾ ಈಗಿರುವ ಸರ್ಕಾರಗಳಲ್ಲಿ ಭಿನ್ನಮತ ಸ್ಫೋಟಗೊಂಡು ರಾಜ ಕೀಯ ಪಕ್ಷಗಳು ಒಡೆದು ಹೋಳಾಗಬಹುದು. ಅಲ್ಲದೆ ಅಖಂಡ ಬಳ್ಳಾರಿ ಜಿಲ್ಲೆಯೂ ಒಡೆದು ಈಗ ವಿಜಯನಗರ ಜಿಲ್ಲೆಯಾಗಿದೆ. ಇದಕ್ಕೆ ರಾಜಕಾರ ಣಿಗಳ ಸ್ವಾರ್ಥ ಮತ್ತು ರಾಜಕೀಯ ಅಧಿಕಾರದ ಆಕಾಂಕ್ಷೆಯೇ ಕಾರಣವಾಗಿದೆ. ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಅಸಮಾಧಾನವಿದ್ದು ಅದು ಅತಂತ್ರತೆಗೆ ಒಳಗಾಗಬಹುದೆಂದು ರಾಜಕೀಯ ಪಕ್ಷದ ಮುಖಂಡರು ಪ್ರತಿಕ್ರಿಯಿಸಿದ್ದು ಕೇಳಿ ಬಂದಿತು.

ಕೋವಿಡ್‌ ಮಾರ್ಗಸೂಚಿ ಅನ್ವಯ ಬಳ್ಳಾರಿ ಜಿಲ್ಲಾಧಿಕಾರಿಗಳು ನಿಷೇಧವನ್ನು ಹೇರಿ, ಕಲಂ 144 ನ್ನು ಜಾರಿಗೊಳಿಸಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದರೂ, ಮೈಲಾರಲಿಂಗೇಶ್ವರನ ಭಕ್ತರು ವಾಹನಗಳನ್ನು ಬಿಟ್ಟು ಕಾಲ್ನಡಿಗೆಯಲ್ಲೇ ಬಂದು ಲಕ್ಷಾಂತರ ಸಂಖ್ಯೆಯಲ್ಲಿ ಜಮಾವಣೆಯಾಗಿದ್ದು ಕೊರೊನಾ ಹೆಮ್ಮಾರಿ ಹರಡುವಿಕೆಯ ತಡೆಗೆ ಕೈಗೊಂಡ ಕ್ರಮ ನಿರರ್ಥಕವೆನ್ನಿಸಿದೆ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದ ಕಾರಣ ನಿಯಂತ್ರಣಕ್ಕೆ ಬಂದಿದ್ದ ಭಕ್ತರು ಶಾಂತಿ, ಸಮಾಧಾನದಿಂದ ವರ್ತಿಸಿದ್ದರಿಂದ ಕಾರಣಿಕೋತ್ಸವ ಯಶಸ್ವಿಯಾಯಿತು. ಯಾವುದೇ ಗೊಂದಲ ಉಂಟಾಗದಂತೆ ಮುಜರಾಯಿ ಇಲಾಖೆ ಕ್ರಮ ಕೈಗೊಂಡಿತ್ತು. ಈ ವೇಳೆ ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್‌ ಅಶ್ವಾರೂಢರಾಗಿ ಕಾರಣಿಕೋತ್ಸವದ ಆವರಣಕ್ಕೆ ಬಂದು ಕಾರಣಿಕದ ಗೊರವಯ್ಯನಿಗೆ ಭಂಡಾರವನ್ನು ಹಚ್ಚಿದರು. ಹಡಗಲಿಯ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಮತ್ತು ಕಾಂಗ್ರೆಸ್‌ ಮುಖಂಡರು, ಸಂಸದ ವೈ. ದೇವೇಂದ್ರಪ್ಪ ಸೇರಿದಂತೆ ಜಿಲ್ಲೆಯ ಯಾವ ರಾಜಕೀಯ ನಾಯಕರೂ ಭಾಗವಹಿಸಿರಲಿಲ್ಲ. ಜಿಲ್ಲಾಧಿಕಾರಿ ಪವನ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲಾ, ಜಿ.ಪಂ. ಸಿಇಓ ನಂದಿನಿ ಸೇರಿದಂತೆ ಹಡಗಲಿ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿಯ ತಹಸೀಲ್ದಾರರು ಹಾಜರಿದ್ದರು. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎ.ಸಿ.ಎಂ ಹೆಚ್‌. ಪ್ರಕಾಶರಾವ್, ಇಓಹೆಚ್‌ ಗಂಗಾಧರಪ್ಪ ಮತ್ತಿತರೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಬೆಳಿಗ್ಗೆ ತ್ರಿಶೂಲ ಪೂಜೆಗೆ ವಿಘ್ನ ಸಂಪ್ರದಾಯದಂತೆ ಕಾರಣಿಕೋತ್ಸವದ ದಿನವಾದ ಸೋಮವಾರ ಬೆಳಿಗ್ಗೆ ತ್ರಿಶೂಲ ಪೂಜೆಯ ವಿಧಿ – ವಿಧಾನಗಳನ್ನು ನೆರವೇರಿಸುವ ಕಾಲಕ್ಕೆ ಮೆರವಣಿಗೆ ಮಾಡುವಾಗ ಕರೆಂಟಿನ ವೈರ್‌ಗೆ ತಾಗಿ ತ್ರಿಶೂಲ ಕೆಳಗೆ ಬಿದ್ದಿತ್ತು. ಇದಕ್ಕೆ ಅಜಾಗರೂಕತೆ ಕಾರಣ ವಾಗಿತ್ತಾದರೂ ಮತ್ತೆ ಸಂರಕ್ಷಣಾ ವಿಧಿ ಹಾಗೂ ಪ್ರಾಯಶ್ಚಿತ್ತ ಹೋಮವನ್ನು ಮಾಡಿ ಸರಿಪಡಿಸಲಾ ಗಿತ್ತು. ಮುಜರಾಯಿ ಇಲಾಖೆಯೇ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು ಕೂಡ.

error: Content is protected !!