ಕುಂಬಾರರು ಬಡವರಾಗಿದ್ದರೂ ಸ್ವಾಭಿಮಾನದಲ್ಲಿ ಶ್ರೀಮಂತರು

ಕುಂಬಾರರು ಬಡವರಾಗಿದ್ದರೂ ಸ್ವಾಭಿಮಾನದಲ್ಲಿ ಶ್ರೀಮಂತರು - Janathavaniಸರ್ವಜ್ಞ ಸಮುದಾಯ ಭವನ/ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದಲ್ಲಿ  ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್

ದಾವಣಗೆರೆ, ಫೆ. 28 – ಆಧುನಿ ಕತೆಯ ಕಾರಣದಿಂದಾಗಿ ಮಡಿಕೆಗಳು ಮೂಲೆಗುಂಪಾಗಿ  ಕುಂಬಾರ ಸಮು ದಾಯ ಬಡವಾಗಿದ್ದರೂ, ಸ್ವಾಭಿ ಮಾನದಲ್ಲಿ ಸದಾ ಶ್ರೀಮಂತವಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ಕುಂಬಾರರ ಸಂಘದ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಸರ್ವಜ್ಞ ಸಮುದಾಯ ಭವನ/ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ನಗರದ ದುರ್ಗಾಂಬಿಕಾ ಜಾತ್ರಾ ಮಹೋ ತ್ಸವದಲ್ಲಿ ಕುಂಬಾರರ ಮಡಿಕೆಯಿಂದಲೇ ಪೂಜಾ ವಿಧಿ ವಿಧಾನಗಳು ಆರಂಭವಾಗುತ್ತವೆ. ಇದೇ ಪದ್ಧತಿ ಎಲ್ಲ ಜಾತ್ರೆಗಳಲ್ಲೂ ಇದೆ. ಈ ರೀತಿ ಕುಂಬಾರರು ಹಿಂದೂ ಸಮುದಾಯದಲ್ಲಿ ಮಾನ್ಯತೆ ಪಡೆದಿದ್ದಾರೆ ಎಂದರು.

ಕುಂಬಾರರ ಸಂಖ್ಯೆ ಕಡಿಮೆ ಇದ್ದರೂ ಅವರು ಕಡೆಗಣಿಸಿದ ಭಾವನೆ ಹೊಂದಬಾರದು. ಜಾತಿಗಳು ಕೇವಲ ವೃತ್ತಿಯಿಂದ ಬಂದಂಥವು. ಇಡೀ ಹಿಂದೂ ಸಮಾಜ ಒಗ್ಗಟ್ಟಾಗಿದೆ ಎಂದವರು ಅಭಿಪ್ರಾಯ ಪಟ್ಟರು.

ಈಗ ಕುಂಬಾರ ಸಮುದಾಯಕ್ಕೆ ನೀಡಿ ರುವ ಜಾಗ ಚಿಕ್ಕದಾಗಿದೆ. ದೊಡ್ಡ ಜಾಗವನ್ನು ದೂಡಾ ವತಿಯಿಂದ ನೀಡಬೇಕೆಂಬ ಬೇಡಿಕೆಯನ್ನು ಪರಿಗಣಿಸುವುದಾಗಿ ಹೇಳಿದ ಶಿವಕುಮಾರ್, ನಿವೇಶನ ಕೊಡಿಸುವ ಜೊತೆಗೆ ಪ್ರಸ್ತಾವನೆಯನ್ನು ಸಂಪುಟದ ಮುಂದಿಟ್ಟು ಕಡಿಮೆ ಬೆಲೆಗೆ ನಿವೇಶನ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.

ಆರ್ಥಿಕವಾಗಿ ಬಲಿಷ್ಠರಾಗಲು ಈಗ ಶಿಕ್ಷಣವೊಂದೇ ಮಾರ್ಗ. ಕುಂಬಾರ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಕುಟುಂಬದ ಒಬ್ಬರಿಗೆ ನೌಕರಿ ಸಿಕ್ಕರೂ ಇಡೀ ಕುಟುಂಬ ಉದ್ಧಾರವಾಗುತ್ತದೆ ಎಂದವರು ತಿಳಿಸಿದರು.

ಸರ್ವಜ್ಞ ಕುಂಬಾರ ಸಮುದಾಯದವರು ಎಂಬುದು ಸಮುದಾಯಕ್ಕೆ ಹೆಮ್ಮೆ. ಸರ್ವಜ್ಞನ ಹೆಸರನ್ನು ನಗರದ ಪ್ರಮುಖ ವೃತ್ತಕ್ಕೆ ಇಡಲು ಹೋರಾಟ ನಡೆಸಬೇಕಿದೆ ಎಂದೂ ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಬಾರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಕುಬೇರಪ್ಪ, ಸರ್ವಜ್ಞ ಕುಂಬಾರ ಸಮುದಾಯಕ್ಕೆ ಸೇರಿದವರಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ಇತಿಹಾಸದಲ್ಲಿ ಯಾರೇ ಬುದ್ಧಿವಂತರಿದ್ದರೆ ಅದು ಉನ್ನತ ಜಾತಿಗೆ ಸೇರಿದವರು ಎಂಬ ಭಾವನೆ ಸರಿಯಲ್ಲ. ಸರ್ವಜ್ಞನ ಹಲವಾರು ತ್ರಿಪದಿಗಳಲ್ಲಿ ಕುಂಬಾರ ಎಂಬ ಸೂಚನೆ ಸಿಗುತ್ತದೆ ಎಂದರು.ಕಾರ್ಯಕ್ರಮಕ್ಕೆ ತಡವಾಗಿ 

ಸಂಘದ ಕೋಶಾಧ್ಯಕ್ಷ ಕೆ.ಸಿ.ಲೋಕೇಶ್ ಹಣಕಾಸು ವರದಿ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಬಿ. ಚಂದ್ರಶೇಖರ್ ಸಂಘದ ವರದಿ ವಾಚಿಸಿದರು.

ವೇದಿಕೆಯ ಮೇಲೆ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಡಾ. ಜಸ್ಟಿನ್ ಡಿಸೋಜ, ಸಾಹಿತಿ – ಸಂಶೋಧಕ ಡಾ. ಮಂಜಪ್ಪ ಬುರುಡೆಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಬಸವರಾಜ ಕುಂಚೂರು  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯ ದರ್ಶಿ ಕೆ.ಹೆಚ್. ಸದಾಶಿವಪ್ಪ ಸ್ವಾಗತಿಸಿದರು.

ಖಾಲಿ ಸಿ.ಎ. ನಿವೇಶನಗಳು ವಾಪಸ್ : ಕೆಲ ಬಲಿಷ್ಠ ಸಮುದಾಯದವರು ಅಗತ್ಯ ಇಲ್ಲದೇ ಇದ್ದರೂ ಸಿ.ಎ. ನಿವೇಶನಗಳನ್ನು ಪಡೆದುಕೊಂಡು ಖಾಲಿ ಬಿಟ್ಟಿದ್ದಾರೆ. ಇಂತಹ ಖಾಲಿ ಬಿಟ್ಟ ನಿವೇಶನಗಳನ್ನು ಗುರುತಿಸಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್ ಪಡೆಯಲಾಗುತ್ತಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.

ಸಿ.ಎ. ನಿವೇಶನಗಳನ್ನು ಪಡೆದರೂ ನಿಗದಿತ ಸಮಯದಲ್ಲಿ ನಿರ್ಮಾಣ ಕೈಗೊಳ್ಳಬೇಕೆಂಬ ನಿಯಮವಿದೆ. ಈ ನಿಯಮ ಮೀರಿ ನಿವೇಶನ ಖಾಲಿ ಉಳಿಸಿಕೊಂಡವರಿಂದ ವಾಪಸ್ ಪಡೆಯಲಾಗುವುದು ಎಂದವರು ಹೇಳಿದ್ದಾರೆ.

error: Content is protected !!