ಬೆಂಗಳೂರಲ್ಲಿ ಭೋರ್ಗರೆದ ಪಂಚಮಸಾಲಿ ಸಾಗರ

ಬೆಂಗಳೂರು, ಫೆ. 21 – ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ದೊರೆಯುವವರೆಗೂ ಪೀಠಕ್ಕೆ ಮರಳುವುದಿಲ್ಲ ಎಂದು ಕೂಡಲಂಗಮದ ಲಿಂಗಾಯತ ಪಂಚ ಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದಾರೆ.

ಭಾನುವಾರ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಪಂಚಮಸಾಲಿ ಸಮಾಜದ ಸಮಾವೇಶದಲ್ಲಿ ಮೀಸಲಾತಿಗೆ ಹಕ್ಕೊತ್ತಾಯ ಮಂಡಿಸಿ ಮಾತನಾಡಿದ ಅವರು, ಪಂಚಮ ಸಾಲಿ ಸಮುದಾಯಕ್ಕೆ ನಿಗಮ, ಅನುದಾನ ಯಾವುದೂ ಬೇಡ. ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಮಾತ್ರ ಬೇಕು ಎಂದವರು ಆಗ್ರಹಿಸಿದರು.

39 ದಿನಗಳ ಕಾಲ ಕೂಡಲಸಂಗಮ ದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ನಡೆದ ಬೃಹತ್ ಪಾದಯಾತ್ರೆಯ ಅಂತಿಮ ಘಟ್ಟವಾಗಿ ಅರಮನೆ ಮೈದಾನದಲ್ಲಿ ಸಮಾ ವೇಶ ಆಯೋಜಿಸಲಾಗಿತ್ತು. ಸಾಗರದಂತೆ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಹಿಂದೆ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಅವರ ಸಮುದಾಯಕ್ಕೆ ಮೀಸಲಾತಿ ನೀಡಿದರು. ದೇವರಾಜ ಅರಸು ಅವರು ಹಿಂದುಳಿದ ವರ್ಗ ಗಳ ಹಲವು ಸಮುದಾಯಗಳಿಗೆ ಮೀಸಲಾತಿ ಕೊಟ್ಟರು. ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲದೇ ಬೇರೆ ಯಾರು ಮೀಸಲಾತಿ ಕೊಡುತ್ತಾರೆ? ಎಂದೂ ಅವರು ಪ್ರಶ್ನಿಸಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಮಾತನಾಡಿ, ಮೀಸಲಾತಿ ನೀಡಲು ಯಡಿಯೂರಪ್ಪ ಪರಮಾಧಿಕಾರ ಹೊಂದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೈಯಲ್ಲಿ ಒ.ಬಿ.ಸಿ. ಮೀಸಲಾತಿ ಇದೆ ಎಂದಿದ್ದಾರೆ.

ಯಡಿಯೂರಪ್ಪ ನುಡಿದಂತೆ ನಡೆಯು ತ್ತಾರೆ ಎಂಬ ನಂಬಿಕೆ ಇದೆ. ಮೀಸಲಾತಿ ನೀಡದಿದ್ದರೆ ಏನು ಮಾಡಬೇಕು ಎಂದೂ ಗೊತ್ತು. ನಮಗೆ ಹಾರ್ಡ್‌ವೇರ್, ಸಾಫ್ಟ್‌ವೇರ್ ಎರಡೂ ಗೊತ್ತು ಎಂದು ಎಚ್ಚರಿಸಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಅವರು ಮಾತನಾಡಿ, ಕಳೆದ 70 ವರ್ಷಗಳಿಂದ ನಮ್ಮ ಸಮುದಾಯ ಮೀಸಲಾತಿಗಾಗಿ ಕಾದಿದೆ. ಇನ್ನೂ ಸ್ವಲ್ಪ ದಿನ ತಾಳ್ಮೆಯಿಂದ ಕಾಯಬೇಕಿದೆ ಎಂದು ಹೇಳಿದರು. ಸಚಿವ ಸಿ.ಸಿ. ಪಾಟೀಲ್ ಮಾತ ನಾಡಿ, ಸಮುದಾಕ್ಕೆ 3ಬಿ ಮೀಸಲಾತಿ ಕೊಟ್ಟ ನಾಯಕ ಯಡಿಯೂರಪ್ಪ. 2ಎ ಅವಸ ರದಲ್ಲಿ ಕೊಟ್ಟಿದ್ದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದರೆ ಹಿನ್ನಡೆಯಾಗುತ್ತದೆ. ಅಧ್ಯಯನ ನಡೆಸಿಯೇ ಮೀಸಲಾತಿ ನೀಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ನಮಗೆ ನ್ಯಾಯ ಸಿಗುವವರೆಗೂ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, 3ಬಿ ಮೀಸಲಾತಿಯನ್ನು ಎಲ್ಲಾ ಲಿಂಗಾಯತ ಸಮುದಾಯಕ್ಕೆ ಕೊಟ್ಟಿದ್ದಾರೆ. ನಾವು 2ಎಗೆ ಮನವಿ ಕೊಟ್ಟು ಸಾಕಾಗಿದೆ. ಈಗ ಮನವಿ ನೀಡುತ್ತಿಲ್ಲ. ಬದಲಿಗೆ ಮೀಸಲಾತಿ ತೆಗೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ವಿರುದ್ಧ ಹರಿಹಾಯ್ದ ಅವರು, ಮುಖ್ಯ ಮಂತ್ರಿ ನಾಟಕ ಕಂಪನಿ ಬಂದ್ ಮಾಡಲಿ. ನಿಮ್ಮ ನಾಟಕ ತಂಡದ ಬಗ್ಗೆ ತಿಳಿದಿದೆ. ಮೀಸ ಲಾತಿ ನೀಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಸುತ್ತೇವೆ ಎಂದು ನೇರವಾಗಿ ಎಚ್ಚರಿಸಿದರು.

ಇದೇ ವೇಳೆ ಪಂಚಮಸಾಲಿ ಮಹಾಸ ಭಾದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೆಸರನ್ನು ಘೋಷಣೆ ಮಾಡಲಾಯಿತು. ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಅಧಿಕಾರವನ್ನು  ಹಸ್ತಾಂತರಿಸಿದರು.

error: Content is protected !!