ದಾವಣಗೆರೆ, ಮಾ. 7- ನಗರದ ಗಡಿಯಾರ ಕಂಬದ ಹತ್ತಿರ ನಡೆಯುತ್ತಿರುವ ರಾಜ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಮಹಾಪೌರರಾದ ಜಯಮ್ಮ ಗೋಪಿ ನಾಯ್ಕ ಅವರು ಇಂದು ವೀಕ್ಷಿಸಿದರು.
ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಸಮೀಪದಲ್ಲಿ ಇರುವುದರಿಂದ ಈ ಸಂದರ್ಭದಲ್ಲಿ ಭಕ್ತಾದಿಗಳು ಮತ್ತು ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು,
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಸ್ಮಾರ್ಟ್ ಸಿಟಿ ನಿರ್ದೇಶಕ ಎಸ್.ಬಾಬು, ಕೆ.ಎಸ್. ಮೋಹನ್, ಎಚ್.ಓ. ದುಗ್ಗಪ್ಪ, ಪಾಲಿಕೆ ಇಂಜಿನಿಯರ್ ಸತೀಶ್ ನಾಯ್ಕ, ಸ್ಮಾರ್ಟ್ ಸಿಟಿ ಎ.ಇ. ವೀರೇಶ್ ಉಪಸ್ಥಿತರಿದ್ದರು.