ದಾವಣಗೆರೆ, ಮಾ.2- ತಾಲ್ಲೂಕಿನ ಆನಗೋಡು ಸಮೀಪದಲ್ಲಿ ರೈತ ಹುತಾತ್ಮರ ಭವನ ನಿರ್ಮಾಣಕ್ಕೆ ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಅನುದಾನ ನೀಡುವಂತೆ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ವತಿಯಿಂದ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ 1992ನೇ ಸೆಪ್ಟೆಂಬರ್ 13ನೇ ತಾರೀಖು ಕೇಂದ್ರ ಸರ್ಕಾರ ಗೊಬ್ಬರ ಬೆಲೆ ಹೆಚ್ಚಳ ಮಾಡಿದ ಸಂದರ್ಭದಲ್ಲಿ ರೈತಪರ ಚಳುವಳಿಯಲ್ಲಿ ಭಾಗಿಯಾದ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ನಿರಪರಾಧಿ ರೈತ ಮುಖಂಡರಾದ ಓಬೇನಹಳ್ಳಿಯ ಕಲ್ಲಿಂಗಪ್ಪ ಮತ್ತು ಸಿದ್ದನೂರು ಗ್ರಾಮದ ನಾಗರಾಜ್ ಚಾರ್ ಅವರುಗಳ ಸ್ಮರಣಾರ್ಥ ರೈತರ ಭವನ ನಿರ್ಮಾಣಕ್ಕೆ ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 25 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಕೋರಿದರು.
ಆನಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಳುಪಿನಕಟ್ಟೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿ -4ರ ಬಳಿ ಪಾರ್ಕ್ ಪಕ್ಕದಲ್ಲಿ ಸರ್ವೆ ನಂ127 ರಲ್ಲಿ 37 ಗುಂಟೆ ಭೂಮಿ ಸರ್ಕಾರದಿಂದ ಮಂಜೂರಾಗಿರುವ ಸ್ಥಳದಲ್ಲಿ ರೈತ ಹುತಾತ್ಮರ ಭವನ ಈಗಾಗಲೇ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ಗೌರವಾಧ್ಯಕ್ಷ ಹೆಚ್. ನಂಜುಂಡಪ್ಪ, ರೈತರಾದ ಹೊನ್ನೂರು ಮುನಿಯಪ್ಪ, ಕಕ್ಕರಗೊಳ್ಳದ ಕಲ್ಲಿಂಗಪ್ಪ, ಶಾಮನೂರು ಲಿಂಗರಾಜ್,
ಹೆಚ್.ಎನ್. ಶಿವಕುಮಾರ್, ಬಿ. ಗಂಗಾಧರ್, ಹೆಚ್.ಎಸ್. ಮುರುಗೇಂದ್ರಪ್ಪ, ಆವರಗೆರೆ ರುದ್ರಮುನಿ, ಎಸ್.ಟಿ. ಪರಮೇಶ್ವರಪ್ಪ ಸೇರಿದಂತೆ ಇತರರು ಇದ್ದರು.