ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಿದರೆ ಎಲ್ಲಿಯೂ ಅಸಮತೋಲನವಿರದು

ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಿದರೆ ಎಲ್ಲಿಯೂ ಅಸಮತೋಲನವಿರದು - Janathavaniಚಿತ್ರದುರ್ಗ, ಫೆ. 21- ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಿ ದರೆ, ಎಲ್ಲಿಯೂ ಅಸಮ ತೋಲನ ಉದ್ಭವಿಸುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಿ ಮುಂಬರುವ ಬಜೆಟ್‍ನಲ್ಲಿ ಸರ್ಕಾರ ಹೆಚ್ಚಿನ ಹಣ ಒದಗಿಸಬೇಕೆಂದು ಡಾ. ಶಿವಮೂರ್ತಿ ಮುರುಘಾ ಶರಣರು ಒತ್ತಾಯಿಸಿದರು.

ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಆಧುನಿಕ ಜಗತ್ತಿನಲ್ಲಿ ಜಲಸಂಪತ್ತು ಅತ್ಯಂತ ಮುಖ್ಯವಾದುದು. ಜಲಸಂಪತ್ತು ಇದ್ದರೆ ಎಲ್ಲ ಸಂಪತ್ತು ಇರುತ್ತದೆ. ಜಲ ಅದು ಜೀವ. ಅನೇಕ ಕಡೆ ಜಲಕ್ಕಾಗಿ ಜಗಳಗಳು ನಡೆಯುತ್ತಿವೆ. ನೀರಿಗಾಗಿ ಹಕ್ಕೊತ್ತಾಯ ಮಾಡುವ ಸಂದರ್ಭಗಳು ಇವೆ. ಮೇಕೆದಾಟು, ಕಳಸಾಬಂಡೂರಿ ಹೀಗೆ ಅನೇಕ. ಮಧ್ಯಕರ್ನಾಟಕದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೂ ಸಹ ಹೋರಾಟ ನಡೆಯುತ್ತಾ ಬಂದಿದೆ. ಕಳೆದ 25 ವರ್ಷಗಳಿಂದ ನಾವುಗಳು ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಅದರ ಫಲವಾಗಿ ಇಂದು ಒಂದಷ್ಟು ನೀರು ಬರಲು ಸಾಧ್ಯವಾಯಿತು. ಇದಕ್ಕೆ ರೈತರು, ಜಿಲ್ಲಾ ಪತ್ರಕರ್ತರು, ನಮ್ಮಂತಹ ಧಾರ್ಮಿಕ ಮುಖಂಡರು ಈ ಹೋರಾಟದಲ್ಲಿ ಕೈಜೋಡಿಸಿದ ಕಾರಣ ಇಂದು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಅನುಕೂಲವಾಯಿತು. ಚಳ್ಳಕೆರೆ, ಮೊಳ ಕಾಲ್ಮೂರು ತಾಲ್ಲೂಕಿನಲ್ಲಿ ಚೆಕ್‍ಡ್ಯಾಂ ಗಳು ತುಂಬಿ ಹರಿಯುತ್ತಿವೆ. ಜನ ಪ್ರತಿ ನಿಧಿಗಳೂ ಜವಾಬ್ದಾರಿಗಳಾಗಿ ರುತ್ತಾರೆ. ಜನಪ್ರತಿನಿಧಿಗಳು ಸಹ ಹೋರಾಟಕ್ಕೆ ಕೈಜೋಡಿಸಿದ್ದರೆ, ಇನ್ನೂ ವೇಗ ಪಡೆಯುತ್ತಿತ್ತು. ನೀರು ಮೂಲಭೂತ ವಾದ ಸಮಸ್ಯೆ. ಆದರೆ ಸ್ವಹಿತಾಸಕ್ತಿಗೆ ಹೋರಾಟ ಮಾಡುತ್ತಿರುವುದು ವಿಷಾದನೀಯ. ನಮಗೆ ನೀರು ಬೇಕು ಎನ್ನುವ ದೃಢ ಸಂಕಲ್ಪ ನಮ್ಮದಾಗಬೇಕು. ಭದ್ರಾ ಮೇಲ್ದಂಡೆ ಯೋಜನೆ ಹಾಗು ಅದನ್ನು ರಾಷ್ಟ್ರೀಯ ಯೋಜನೆಗೂ ಸಹ ಹಕ್ಕೊತ್ತಾಯ ಮಾಡುತ್ತಾ ಬಂದಿದ್ದೇವೆ. ಅದರ ಪರಿಣಾಮವಾಗಿ ಮಾನ್ಯ ಮುಖ್ಯಮಂತ್ರಿಗಳು ರಾಷ್ಟ್ರೀಯ ಯೋಜನೆಗೆ ಶಿಫಾರಸ್ಸು ಮಾಡಿರುವುದು ಅಭಿನಂದನೀಯ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಿದರೆ, ಎಲ್ಲಿಯೂ ಅಸಮತೋಲನ ಉದ್ಭವಿಸುವುದಿಲ್ಲ. ನಾವು ಈ ಹೋರಾಟವನ್ನು ತೀವ್ರವಾಗಿಸುತ್ತೇವೆ. ಸರ್ಕಾರ ಬಜೆಟ್‍ನಲ್ಲಿ ಹೆಚ್ಚಿನ ಹಣ ತೆಗೆದಿರಿಸಬೇಕು ಎಂದು ಒತ್ತಾಯಿಸಿದರು.

ಏರಿ ಭದ್ರ ಮಾಡುವುದು, ಹೂಳು ತೆಗೆಸುವುದು ಮುಖ್ಯವಾದದ್ದು. ಈಗಾಗಲೇ ಜಿಲ್ಲೆಯ ಎಲ್ಲ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರನ್ನೊಳ ಗೊಂಡಂತೆ ಶ್ರೀಮಠಕ್ಕೆ ಕರೆಯಿಸಿ ಚರ್ಚೆ ಮಾಡಿ ದ್ದೇವೆ. ಸಾಧ್ಯವಾದರೆ ಇಲ್ಲಿಂದ ಒಂದು ನಿಯೋಗ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ತಯಾರಿದ್ದೇವೆ. ರೈಲ್ವೆ, ಇಂಡಸ್ಟ್ರೀಯಲ್ ಕಾರಿಡಾರ್‍ಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಸರ್ಕಾರವೂ ಸಹ ಗಮನಹರಿಸಿದೆ. ಜಿಲ್ಲೆಗೆ ಬೇಕಾಗಿರುವ ಅನುಕೂಲತೆಗಳನ್ನು ನಾವು ಮಾಡಬೇಕಿದೆ. ಕೆರೆಗಳಿಗೆ ಕಾಯಕಲ್ಪ ಮಾಡಬೇಕಿದೆ ಎಂದು ತಿಳಿಸಿದರು.

ರೈತ ಮುಖಂಡ ನುಲೇನೂರು ಶಂಕ್ರಪ್ಪ ಮಾತನಾಡಿ, ಭೂಮಿ ಒತ್ತುವರಿ ಒಂದಷ್ಟು ಕಡೆಯಾಗಿದೆ. 1.9 ಕಿಲೋಮೀಟರ್ ಚಾನಲ್‍ಗೆ ತಡೆಯಾಗಿದೆ. ಅದನ್ನು ಸರ್ಕಾರ ತುರ್ತಾಗಿ ಗಮನಹರಿಸಬೇಕು ಎಂದರು.

ಬಸ್ತಿಹಳ್ಳಿ ಸುರೇಶ್‍ಬಾಬು, ಪಟೇಲ್ ಶಿವಕುಮಾರ್, ಮಲ್ಲಿಕಾರ್ಜುನ ಸ್ವಾಮಿಗಳು, ಎ.ಜೆ.ಪರಮಶಿವಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆಇಬಿ ಷಣ್ಮುಖಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ, ಹಿರಿಯೂರು ಹೊರಕೇರಪ್ಪ ಮೊದಲಾದವರಿದ್ದರು.

error: Content is protected !!