ಮೈಲಾರದಲ್ಲಿ ಮೈನವಿರೇಳಿಸಿದ ಶಸ್ತ್ರ ಪವಾಡ

ಹೂವಿನಹಡಗಲಿ, ಫೆ.20- ಮಲ್ಲಿಗೆ ನಾಡು ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ನಡೆದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಕಾರಣಿಕೋತ್ಸವದ ಮರುದಿನ ಸಂಜೆ ಗಂಗಿಮಾಳಮ್ಮ ದೇವಸ್ಥಾನದ ಆವರಣದಲ್ಲಿ  ಕಂಚಾವೀರರು ಮೈನವಿರೇಳಿಸುವ ವಿವಿಧ ಪವಾಡಗಳನ್ನು ಪ್ರದರ್ಶಿಸಿದರು. ಈ ಪವಾಡಗಳ  ಪೈಕಿ ಸರಪಳಿ ಹರಿಯುವುದು ಮತ್ತು ಕಾಲಿಗೆ ಶಸ್ತ್ರ ಚುಚ್ಚಿಕೊಳ್ಳುವುದು ಮೊದಲಾದ ಪವಾಡಗಳು ಹೆಚ್ಚು ಭಯಾನಕ ಹಾಗೂ ಚಕಿತಗೊಳಿಸಿದವು. 

ಸಂಜೆ ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತರಾದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಇವರ ಆಶೀರ್ವಾದದ ನಂತರ ಕಂಚಾವೀರರು ತಮ್ಮ ಪವಾಡ ಪ್ರದರ್ಶನಕ್ಕೆ ಮುಂದಾದರು. ಕಬ್ಬಿಣದ ಸಲಾಕೆಯನ್ನು ಕಾಲಿಗೆ ಚುಚ್ಚಿಕೊಳ್ಳುವುದು. ಬಲವಾದ ಕಬ್ಬಿಣದ ಸರಪಳಿಗಳನ್ನು ತುಂಡು ಮಾಡುವುದು ಮತ್ತು ಕಂಚಾವೀರರು ಆರ್ಭಟಿಸುವುದು. ಅರಚುವುದು ನೋಡಿದ ಮಕ್ಕಳು, ಮಹಿಳೆಯರು ಭಯಭೀತರಾಗಿದ್ದು, ಕಂಡುಬಂದಿತು. 

ವಂಶಪಾರಂಪರಿಕವಾಗಿ ಕಂಚಾವೀರರು ಸೇವೆಯ ರೂಪದಲ್ಲಿ ಶ್ರೀ ಮೈಲಾರಲಿಂಗ ಸ್ವಾಮಿಯ ಚಾಕರಿಯ ಮಾಡುತ್ತಾ ಬರುತಿರುವುದಾಗಿ ಕಂಚಾವೀರರು ತಿಳಿಸಿದರು. ಸೂಕ್ತ ಪೊಲೀಸರು ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

error: Content is protected !!