ಸಾಸ್ವೆಹಳ್ಳಿ, ಫೆ. 15- ಇಲ್ಲಿನ ಪ್ರೌಢ ಶಾಲೆಗೆ 50ಕ್ಕೂ ಹೆಚ್ಚು ವಿದ್ಯಾರ್ಥಿನಿ ಯರು ಹಿಜಾಬ್ ಹಾಗೂ 10ಕ್ಕೂ ಹೆಚ್ಚು ಬಾಲಕರು ತಮ್ಮ ಧರ್ಮದ ಟೋರಿ ಧರಿಸಿ ಬಂದಿದ್ದು, ಶಾಲೆಯ ಪ್ರಾಂಶುಪಾಲರು, ಉಪಪ್ರಾಂಶು ಪಾಲರು, ಹಿಜಾಬ್ ಹಾಗೂ ಟೋಪಿ ತೆಗೆದು ತರಗತಿಗೆ ಹೋಗಲು ತಿಳಿಸಿ ದಾಗ ವಿದ್ಯಾರ್ಥಿಗಳು ನಿರಾಕರಿಸಿದ ಘಟನೆ ನಡೆದಿದೆ.
ಇಬ್ಬರು ಅತಿಥಿ ಶಿಕ್ಷಕಿಯರೂ ಸಹ ಹಿಜಾಬ್ ಧರಿಸಿ ಬೋಧನೆ ಮಾಡುತ್ತಿ ದ್ದರು. ಅವರಿಗೂ ಅಧಿಕಾರಿಗಳು ಹಿಜಾಬ್ ಧರಿಸುವಂತಿಲ್ಲ ಎಂದು ತಿಳಿಸಿ ದಾಗ, ಶಿಕ್ಷಕಿಯರು ತರಗತಿಯಿಂದ ಹೊರ ನಡೆದಿದ್ದಾರೆ.
ಕಂದಾಯ ಇಲಾಖೆಯ ಉಪತಹಶೀಲ್ದಾರ್ ಎಸ್. ಪರಮೇಶ್ ನಾಯ್ಕ್, ಎಸ್‍ಐ ಬಸವನಗೌಡ ಬಿರಾದಾರ್, ತಾಲ್ಲೂಕು ಪಂಚಾಯಿತಿ ಇಒ ಹಾಗೂ ಹೊನ್ನಾಳಿ ತಾಲ್ಲೂಕಿನ ಗ್ರಾಮೀಣ ಭಾಗದ ನೋಡಲ್ ಅಧಿಕಾರಿ ರಾಮ ಭೋವಿ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಇ ರಾಜೀವ್ ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನಿಸಿದರು. ಹಿಜಾಬ್ ಧರಿಸಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಮುಖ್ಯ ಎಂದು ಹೇಳಿ ಶಾಲೆಯಿಂದ ಹೊರ ನಡೆದಿದ್ದಾರೆ.
ತಹಶೀಲ್ದಾರ್ ಬಸನ ಗೌಡ ಕೋಟೂರು ಸ್ಥಳಕ್ಕೆ ಬಂದು ಸ್ಥಳೀಯ ಮುಖಂಡರಾದ ಜಬ್ಬಾರ್ ಖಾನ್, ಸುಲೇಮಾನ್ ಖಾನ್, ಇದಾಯತ್ ಉಲ್ಲಾ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ನಂತರ ಜಿಲ್ಲಾಧಿಕಾರಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಹಿಜಾಬ್ ತೆಗೆಸಿ, ಹೆಗಲ ಮೇಲೆ ಹಾಕಿ ಕೊಂಡು ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು.
ಪ್ರಾಂಶುಪಾಲರಾದ ಆರ್. ದೇವೀರಪ್ಪ ಮಾತನಾಡಿ, ಪೋಷಕರ ಸಭೆ ಕರೆದು ಅವರಿಗೆ ನ್ಯಾಯಾಲಯದ ತೀರ್ಪಿನ ಬಗ್ಗೆ ಮಾಹಿತಿ ನೀಡಿದ್ದೇವೆ. ಶಾಂತಿ ಸೌಹಾರ್ದತೆ ಕಾಪಾಡಲು ತಿಳಿಸ ಲಾಗಿದೆ. ಪದವಿ ಪೂರ್ವ ಕಾಲೇಜು ಪೋಷಕರ ಸಭೆಯಲ್ಲಿ ಮಾಹಿತಿ ನೀಡಲಾಗಿದೆ. ಹಿಜಾಬ್, ಶಾಲು ಧರಿಸಿ ಬರುವಂತಿಲ್ಲ ಎಂದು ತಿಳಿಸಿದರು.