ಪರೀಕ್ಷೆಗೆ ಪಠ್ಯ ಶಿಕ್ಷಣ, ಬದುಕಿಗೆ ಜೀವನ ಶಿಕ್ಷಣ

ಹರಿಹರ ಎಸ್.ಜೆ.ವಿ.ಪಿ. ಮಹಾವಿದ್ಯಾಲಯದಲ್ಲಿ ಹೆಚ್.ಬಿ. ಮಂಜುನಾಥ

ಹರಿಹರ, ಫೆ. 9- ವಾರ್ಷಿಕ ಪರೀಕ್ಷೆ ಎದುರಿಸಿ ಅಂಕ ಗಳಿಸಲು ಶಾಲಾ-ಕಾಲೇಜು ಶಿಕ್ಷಣ ಸಾಕು. ಆದರೆ, ಬದುಕು ಎದುರಿಸಲು ಜೀವನ ಶಿಕ್ಷಣ ಬೇಕೇ ಬೇಕು. ಜೀವನ ಶಿಕ್ಷಣವನ್ನು ಪಠ್ಯೇತರ ಚಟುವಟಿಕೆಗಳ ಮೂಲಕವೂ  ಪಡೆಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ ಹೇಳಿದರು. 

ಇಲ್ಲಿನ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪದವಿ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು. ಪಠ್ಯೇತರವಾದ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಮುಂತಾದ ಯಾವುದೇ ಚಟುವಟಿಕೆಗಳಲ್ಲಿ ಭಾರತೀಯವಾದ ಸಂಸ್ಕೃತಿಗೆ ಆದ್ಯತೆ ಕೊಡಬೇಕು. ಭಾರತೀಯವಾದ ಸಂಸ್ಕೃತಿಯಲ್ಲಿ ಸೌಹಾರ್ದತೆಗೂ, ಜೀವನ ಮೌಲ್ಯಗಳಿಗೂ ಪ್ರಾಶಸ್ತ್ಯವಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ ಮಾತನಾಡಿ, ಉತ್ತಮ ಕಾರ್ಯಕ್ಕೆ ಯುವಜನತೆಯ ಸ್ಪಂದನೆ ಮುಖ್ಯ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಎಂ. ಮುರಿಗಿಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಹಾಗೂ ಕಲಾ ವೇದಿಕೆಯ ಸಂಯೋಜಕ ಪ್ರೊ.ಸಿದ್ದಯ್ಯ ಎಸ್. ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. 

ಶಿಕ್ಷಣ ಸಂಸ್ಥೆಯ ನಿರ್ದೇಶಕ ಎನ್.ಎಂ. ತಿಪ್ಪೇಸ್ವಾಮಿ, ನ್ಯಾಕ್  ಸಂಯೋಜಕ ಪ್ರೊ.ಬಿ. ಕೆ. ಮೊಹಮ್ಮದ್ ಸಾಲೇಹಾ, ಮಾನವ ಹಕ್ಕುಗಳ ವೇದಿಕೆ ಸಂಯೋಜಕ ಪ್ರೊ.ಹೆಚ್. ಎಂ. ವೇದಮೂರ್ತಿ ಆರಾಧ್ಯ, ಮಹಿಳಾ ವೇದಿಕೆಯ ಸಂಯೋಜಕಿ ಡಾ.ಎಂ.ಹೆಚ್. ಶಿವಗಂಗಮ್ಮ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವೇದಿಕೆ ಸಂಯೋಜಕ ಡಾ.ಪರಮೇಶ್ವರ ನಾಯ್ಕ, ಉದ್ಯೋಗ ಮಾಹಿತಿ ವೇದಿಕೆ ಸಂಯೋಜಕ ಪ್ರೊ. ರಮೇಶ್ ಕೆ. ಪರ್ವತಿ, ಕನ್ನಡ ವಿಭಾಗದ ಮುಖ್ಯಸ್ಥೆ ರೇಣುಕಾ ಸಂಕನಗೌಡರ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ.ರಶ್ಮಿ ಜಿ. ಹೆಚ್, ಉರ್ದು ವಿಭಾಗದ ಮುಖ್ಯಸ್ಥ ಅಪ್ಸರ್ ಅಲಿ, ಕಲಾ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳಾದ ಫೌಜಿಯಾ ಖಾನಂ, ಜಿ. ಹೆಚ್. ಗೌತಮ್ ಉಪಸ್ಥಿತರಿದ್ದರು.

error: Content is protected !!