ಗ್ರಾಮೀಣ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡಬೇಕು

ಜಿ.ಪಂ. ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ದೊಡ್ಡಮನಿ

ಮಲೇಬೆನ್ನೂರು, ಜ.23- ಗ್ರಾಮಾಂತರ ಪ್ರದೇಶದ ಮಕ್ಕಳು ತಂತ್ರ ಜ್ಞಾನದ ಪ್ರಯೋಜನ ಪಡೆದುಕೊಂಡು, ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡಬೇಕೆಂದು ಜಿಲ್ಲಾ ಪಂಚಾಯತ್ ಅವರು ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ದೊಡ್ಡಮನಿ  ಕರೆ ನೀಡಿದರು.  

ಶುಕ್ರವಾರ ಜಿ. ಎಮ್. ಸಿ. ಜಿ.  ಪ್ರೌಢಶಾಲೆಗೆ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್  ಕಿರಣ್ ಕುಮಾರ್ ನೀಡಿದ ಪ್ರೊಜೆಕ್ಟರ್ ಸ್ವೀಕರಿಸಿ ಮಾತನಾಡಿದರು,  

ಗ್ರಾಮೀಣ ಪ್ರದೇಶದಲ್ಲಿನ ಶಾಲಾ ಮಕ್ಕಳು ನಗರ ಪ್ರದೇಶದ ಖಾಸಗಿ ಶಾಲಾ ಮಕ್ಕಳಂತೆ ಅಂತರ್ಜಾಲದ ಪ್ರಯೋ ಜನ ಪಡೆದುಕೊಳ್ಳಬೇಕು. ಇಂದು ಶಿಕ್ಷಣದ ಪ್ರತಿ ಹಂತದಲ್ಲೂ ಗಣಕ ಯಂತ್ರ ಅಂತರ್ಜಾಲ ಹಾಸು ಹೊಕ್ಕಾಗಿದೆ. ಅಂತರ್ಜಾಲವನ್ನು ಸಮ ರ್ಪಕವಾಗಿ ಬಳಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು  ಹೇಳಿದರು.  

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳ ಕಲಿಕೆಗೆ ಪ್ರೊಜೆಕ್ಟರ್ ತುಂಬಾ ಸಹಕಾರಿಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡರೆ ಉನ್ನತ ಮಟ್ಟ ತಲುಪಲು ಸಾಧ್ಯ ಎಂದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಎಂ.  ಮಂಜುನಾಥಯ್ಯ, ಮುಖ್ಯ ಶಿಕ್ಷಕ ಗುರುಬಸಯ್ಯ, ಅಕ್ವೀನ್ ಸಂಸ್ಥೆಯ ಬಸಯ್ಯ  ಹಿರೇಮಠ್, ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ  ಶರಣ ಕುಮಾರ್ ಹೆಗಡೆ,  ಬಸವರಾಜ್, ಕರಿಬಸಪ್ಪ ಬಸಲೆ, ಸಂತೋಷ್, ಮಲ್ಲಪ್ಪ, ರುದ್ರಪ್ಪ. ಶಂಕರ್ ನಾಯಕ್ ಹಾಜರಿದ್ದರು,

error: Content is protected !!