ದಾವಣಗೆರೆ,ಜ.21- ಕೊರೊನಾ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ವಾರಾಂತ್ಯದ ಕರ್ಫ್ಯೂ ರದ್ದುಪಡಿಸಿ ಸರ್ಕಾರ ಕೈಗೊಂಡಿರುವ ಕ್ರಮವನ್ನು ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಸ್ವಾಗತಿಸಿದ್ದಾರೆ.
ಓಮಿಕ್ರಾನ್ ತಡೆಗಟ್ಟುವ ನೆಪದಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸುವುದರಿಂದ ಜನ ಸಾಮಾನ್ಯರ ಜನಜೀವನ ತೀವ್ರ ಸಂಕಷ್ಟ ಕ್ಕೊಳಗಾಗುವ ಕಾರಣ ಕರ್ಫ್ಯೂ ಹಿಂತೆಗೆದು ಕೊಳ್ಳಬೇಕು ಎಂದು ಅನೇಕರು ಮಾಡಿ ಕೊಂಡ ಮನವಿಯನ್ನು ಪುರಸ್ಕರಿಸಿರುವ ಸರ್ಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಹಿಂದೆ ಕರ್ಫ್ಯೂ ವಿಧಿಸಿದ ಕಾರಣ ಸಾವಿರಾರು ಕೋಟಿ ರೂ. ನಷ್ಟು ದೇಶದ ಆರ್ಥಿಕ ಪರಿಸ್ಥಿಗೆ ದಕ್ಕೆ ಉಂಟಾಗಿತ್ತು. ಇದರಿಂದ ದೇಶದ ಅಭಿವೃದ್ಧಿಯೂ ಕುಂಠಿತಗೊಳ್ಳಲು ಕಾರಣವಾಗಿತ್ತು. ಕರ್ಫ್ಯೂ ವಿಧಿಸುವ ಬದಲು ಕೊರೊನಾ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕಠಿಣವಾಗಿ ಕೈಗೊಳ್ಳಬಹುದು ಎಂದು ಹಲವರು ನೀಡಿದ ಸಲಹೆಗಳು ಸರ್ಕಾರಕ್ಕೆ ಮನವರಿಕೆಯಾಗಿ ಕರ್ಫ್ಯೂ ಹಿಂತೆಗೆದುಕೊಂಡಿರುವ ಕ್ರಮ ಸಮಂಜಸವಾಗಿದೆ ಎಂದು ಹೇಳಿದ್ದಾರೆ.