ದಾವಣಗೆರೆ ಮಹಾನಗರ ಪಾಲಿಕೆ ಮುಂಭಾಗಲ್ಲಿನ ರೈಲ್ವೇ ಅಂಡರ್ ಬ್ರಿಡ್ಜ್ ಬಳಿ ನೀರಿನ ಟ್ಯಾಂಕರ್ ಸೇರಿದಂತೆ ಸರಕು ವಾಹನಗಳು ಸಂಚರಿಸುವಾಗ ಅಡ್ಡಲಾಗಿ ನಿರ್ಮಿಸಲಾಗಿರುವ ಕಬ್ಬಿಣದ ಪಟ್ಟಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಎರಡೂ ಬದಿಯಲ್ಲೂ ಇಂತಹದ್ದೊಂದು ಅಡ್ಡಪಟ್ಟಿ ನಿರ್ಮಿಸಿದರೆ ಅಡ್ಡಿ ಇಲ್ಲ. ಆದರೆ ಮಂಡಿಪೇಟೆಯಿಂದ ಬರುವ ಮಾರ್ಗದ ಕಡೆ ಇಂತಹ ಪಟ್ಟಿ ಇರದ ಕಾರಣ ವಾಹನಕ್ಕೆ ಯಾವುದೇ ತಡೆಯಾಗದು ಎಂದು ಭಾವಿಸಿದ ಸವಾರರು ವಾಹನ ತಂದಾಗ ಬ್ರಿಡ್ಜ್ ಏರುವಾಗ ಮತ್ತೊಂದು ಬದಿಯಲ್ಲಿರುವ ಪಟ್ಟಿ ಅಡ್ಡಗಟ್ಟುತ್ತದೆ. ಇದರಿಂದ ಹಿಂದೆಯೂ ಹೋಗಲಾಗದೆ, ಮುಂದೆಯೂ ಬರಲಾಗದೆ ಕೇವಲ ಸರಕು ಅಥವಾ ಟ್ಯಾಂಕರ್ ವಾಹನಗ ಳಷ್ಟೇ ಅಲ್ಲ. ಹಿಂಬದಿಯ ವಾಹನ ಸವಾರರೂ ತಾಪತ್ರಯಕ್ಕೆ ಸಿಕ್ಕಿಕೊಳ್ಳಬೇಕಾಗುತ್ತದೆ.
December 28, 2024