ಗತಿ ಇಲ್ಲದವರಷ್ಟೇ ಅಲ್ಲ, ನೀನೇ ಗತಿ ಎಂದೆನಿಸಿಕೊಳ್ಳುವ ದೇವರೂ ಸಹ ಇಲ್ಲಿ ಬೀದಿಗೆ ಬಿದ್ದಿದ್ದಾನೆ. ದಾವಣಗೆರೆಯ ರಾಷ್ಟ್ರೋತ್ಥಾನ ಶಾಲೆ ಕಡೆಯಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ದಾರಿ ಮಧ್ಯದಲ್ಲಿರುವ ಬೃಹತ್ ಮರವೊಂದರ ಬುಡದಲ್ಲಿ ಜನರು ಹಳೆಯ ಅಥವಾ ಮುಕ್ಕಾದ ದೇವರ ಫೋಟೋಗಳನ್ನಿಟ್ಟು ತೆರಳುತ್ತಿದ್ದಾರೆ. ಅದೇ ಸ್ಥಳದಲ್ಲಿ ಬುಧವಾರ ಚಿಂದಿ ಆಯುವ ಮಹಿಳೆಯೊಬ್ಬಳು ವಿಶ್ರಮಿಸುತ್ತಿರುವ ದೃಶ್ಯವಿದು. ಈ ಇಬ್ಬರಿಗೂ ಒದಗಿರುವ `ಬೀದಿ ಪಾಲು ಗತಿಗೆ’ ಕಾರಣ ಯಾರು? ಎಂಬುದು ಮನದಲ್ಲುಳಿಯುವ ಪ್ರಶ್ನೆ. ಒಟ್ಟಿನಲ್ಲಿ ಇಬ್ಬರೂ `ನಿರ್ಗತಿಕರು’
December 28, 2024