ದಾವಣಗೆರೆ, ಜ.13- ಬಾಪೂಜಿ ವಿದ್ಯಾಸಂಸ್ಥೆಯ ಧರಾಮ ವಿಜ್ಞಾನ ಪದವಿ ಕಾಲೇಜಿನಲ್ಲಿ ವಿಜ್ಞಾನ ವೇದಿಕೆ ಅಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳು ಸಂಯೋಜನೆಗೊಂಡಿದ್ದವು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಿರಿಯ ಪಶು ವೈದ್ಯಾಧಿಕಾರಿ ಡಾ. ಕೆ.ಯು. ಅನಿಲ್ ಅವರು ಹೈನುಗಾರಿಕೆ ಮತ್ತು ಪ್ರಾಣಿ ಹಾಗೂ ಸಸ್ಯಗಳಲ್ಲಿನ ವೈರಾಣು ಮತ್ತು ಬ್ಯಾಕ್ಟೀರಿಯ ಕಾಯಿಲೆಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ವನಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ವೇದಿಕೆಯ ಸಂಚಾಲಕರಾದ ಡಾ. ಬಿ.ಸಿ. ಚೇತನಾ, ಐಕ್ಯೂಎಸಿ ಸಂಯೋಜಕರಾದ ಕಮಲ ಸೊಪ್ಪಿನ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಂಗಳಗೌರಿ, ದೈಹಿಕ ನಿರ್ದೇಶಕರಾದ ಎಸ್.ಆರ್. ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ದರ್ಶಿನಿ ಪ್ರಾರ್ಥಿಸಿದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಿರಿಮಲ್ಲೇಶ್ವರ ಬಗರಿ ನಿರೂಪಿಸಿದರು.
ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಂಜುನಾಥ ಬಸಪ್ಪಚನ್ನಿ ಸ್ವಾಗತಿಸಿದರು. ಡಾ. ಹರೀಶ್ ಕುಮಾರ ಸಂಪನ್ಮೂಲ ವ್ಯಕ್ತಿ ಪರಿಚಯಿಸಿದರು.
ಡಾ. ಓ. ನಾಗರಾಜ ವಂದಿಸಿದರು.