ದಾವಣಗೆರೆ, ಮೇ 5- ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವತಿಯಿಂದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ಕಳೆದ ಕಳೆದ ವಾರ ನಡೆದವು.
ಶಿಕ್ಷಣ ಶಿಲ್ಪಿ ಎಂ.ಎಸ್.ಶಿವಣ್ಣನವರ ಸ್ಮಾರಕ ಸ್ಥಳ ಆನಗೋಡಿನ ಸಿದ್ಧಗಂಗೋತ್ರಿಯಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಖೋ-ಖೋ, ಕ್ರಿಕೆಟ್ ಪಂದ್ಯಾವಳಿಗಳು ನಡೆದವು.
ಸಾಂಸ್ಕೃತಿಕ ಸ್ಪರ್ಧೆಗಳು ಜಾನಪದ ನೃತ್ಯ, ಮೂಕಾಭಿನಯ. ಸಾಮೂಹಿಕ ಗೀತೆ, ಮ್ಯಾಡ್ ಆಡ್ಸ್ಗಳಲ್ಲಿ ನಡೆಯಿತು. ಸಿದ್ದಗಂಗಾ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿ’ಸೌಜ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಕರಾದ ರಘು, ಲಿಂಗರಾಜು, ಶ್ರೀನಿವಾಸ್, ಸಾಮ್ಯಾನಾಯ್ಕ, ಆರೋಗ್ಯಮ್ಮ, ಸುನೀತ, ಮಾಧುರಿ ಇವರ ನೇತೃತ್ವದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಜಿ.ಸಿ. ನಿರಂಜನ್ ಮತ್ತು ಎಲ್ಲಾ ಉಪನ್ಯಾಸಕರು ಹಾಜರಿದ್ದರು.
ಎಂ.ಎಸ್.ಶಿವಣ್ಣ ಅವರ ದ್ವಿತೀಯ ವರ್ಷದ ಸ್ಮರಣೆ ಅಂಗವಾಗಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ಜವಾಬ್ದಾರಿಯನ್ನು ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಹೇಮಂತ್, ಹಿರಿಯ ವಿದ್ಯಾರ್ಥಿ ಹರ್ಷ, ಮನು ಮತ್ತು ಬೋಧಕೇತರ ಸಿಬ್ಬಂದಿ ನಿರ್ವಹಿಸಿದರು.