ಯಲವಟ್ಟಿ ಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಅಭಿಮತ
ಮಲೇಬೆನ್ನೂರು, ಮೇ 5- ಬರೀ ಶಿಕ್ಷಣ ಪಡೆದರೆ ಸಾಲದು, ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನೂ ಮೈಗೂಡಿಸಿಕೊಳ್ಳಬೇಕೆಂದು ಯಲವಟ್ಟಿಯ ಗುರು ಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.
ಯಲವಟ್ಟಿಯ ತಮ್ಮ ಆಶ್ರಮದಲ್ಲಿ ಅಕ್ಷಯ ತೃತೀಯ ಅಮಾವಾಸ್ಯೆ ಅಂಗವಾಗಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮನುಷ್ಯನ ಉತ್ತಮ ಬದುಕಿಗೆ ಸಂಸ್ಕಾರ ಬಹಳ ಮುಖ್ಯವಾಗಿದ್ದು, ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜೊತೆಗೆ ತಂದೆ-ತಾಯಿ, ಗುರುಗಳು, ನೆರೆಹೊರೆಯವರ ಬಗ್ಗೆ ಪ್ರೀತಿ, ಗೌರವದ ಭಾವನೆಗಳನ್ನು ಬೆಳೆಸಿ ಎಂದರು.
ದಾಗಿನಕಟ್ಟೆಯ ಶ್ರೀ ಸಿದ್ಧಾರೂಢ ಆಶ್ರಮದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಸತ್ಸಂಗದ ಮರ್ಮ ತಿಳಿದವನ ಬದುಕು ಬಂಗಾರವಾಗುತ್ತದೆ ಎಂದರು. ಅನ್ನ ದಾಸೋಹಿಗಳಾಗಿದ್ದ ಹೊಳೆಸಿರಿಗೆರೆಯ ಮಾಗೋಡ್ ಈಶ್ವರಪ್ಪ ಮತ್ತು ಕುಟುಂಬದವರನ್ನು, ಶ್ರೀಗಳನ್ನು ಸನ್ಮಾನಿಸಿ, ಗೌರವಿಸಿದರು.
ಗ್ರಾಮದ ಜಿ. ಬಸಪ್ಪ ಮೇಷ್ಟ್ರು, ಮುರುಗೆಪ್ಪ ಗೌಡ್ರು, ಹೊಸಮನಿ ಮಲ್ಲಪ್ಪ, ಎ. ಸುರೇಶ್, ವೇದಮೂರ್ತಿ ರೇವಣಸಿದ್ದಯ್ಯ, ಹಲಸಬಾಳ್ ಸಿದ್ದೇಶ್, ಜಿಗಳಿಯ ಜಿ. ಆನಂದಪ್ಪ, ರಂಗಪ್ಪ, ಪತ್ರಕರ್ತ ಪ್ರಕಾಶ್, ಕುಂಬಳೂರಿನ ಕೆ. ಕುಬೇರಪ್ಪ, ಹೆಚ್.ಎಂ. ಸದಾಶಿವ, ದಾಗಿನಕಟ್ಟೆಯ ವಕೀಲ ಚಂದ್ರಪ್ಪ, ಹೊಳೆಸಿರಿಗೆರೆಯ ಮಾಳಗಿ ಕೊಟ್ರಪ್ಪ, ಮಾಗೋಡ್ ಸಿದ್ದಣ್ಣ, ಶಿಕ್ಷಕ ಮಾಗೋಡ್ ಮಹೇಶ್ವರಪ್ಪ, ಕೆ.ಎನ್. ಹಳ್ಳಿಯ ಕೃಷ್ಣಪ್ಪ, ಶಿಕ್ಷಕ ನಂದಿಗುಡಿ ಬಸಯ್ಯ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿದರು. ಸಿರಿಗೆರೆಯ ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.