ಬಿ-ಖಾತೆಗೆ ದಾಖಲೆ ನೀಡಲು ಅಲೆದಾಡಿಸಬೇಡಿ

ಬಿ-ಖಾತೆಗೆ ದಾಖಲೆ ನೀಡಲು ಅಲೆದಾಡಿಸಬೇಡಿ

ಅಧಿಕಾರಿಗಳಿಗೆ ಮಾಜಿ ಶಾಸಕ ರಾಮಪ್ಪ ಕರೆ

ಹರಿಹರ, ಮಾ.28- ಸಾರ್ವಜನಿಕರನ್ನು ಅಲೆದಾಡಿಸದಂತೆ ಬಿ- ಖಾತೆ ದಾಖಲೆಗಳನ್ನು ನೀಡುವಂತೆ ಮಾಜಿ ಶಾಸಕ ಎಸ್. ರಾಮಪ್ಪ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರಿಗೆ ಸೂಚನೆ ನೀಡಿದರು. ನಗರಸಭೆಯ ಕೊಠಡಿಗೆ ಆಗಮಿಸಿ, ಸಾರ್ವಜನಿಕರಿಗೆ ಬಿ ಖಾತಾ ನೀಡುವಲ್ಲಿ ವಿಳಂಬ ಆಗುತ್ತಿರುವ ಸಮಸ್ಯೆಗಳನ್ನು ಆಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.  

ರಾಜ್ಯ ಸರ್ಕಾರ ಅಕ್ರಮ ಆಸ್ತಿಯನ್ನು  ಸಕ್ರಮ ಗೊಳಿಸಿಕೊಳ್ಳುವಂತೆ  ಸಾರ್ವಜನಿಕರಿಗೆ ಇ ಖಾತಾ ಮತ್ತು ಬಿ ಖಾತಾ ವನ್ನು ಮೂರು ತಿಂಗಳ ಒಳಗಾಗಿ ನೀಡುವಂತೆ ಆದೇಶವನ್ನು ಮಾಡಿದ್ದರ, ಅನ್ವಯದಂತೆ ಸಾರ್ವಜನಿಕರು ನಗರಸಭೆಯ ಕಚೇರಿಗೆ ಬಿ ಖಾತಾ ದಾಖಲೆಗಳನ್ನು ಪಡೆಯುವುದಕ್ಕೆ ಅರ್ಜಿಗಳನ್ನು ಸಲ್ಲಿಸಲು ದೊಡ್ಡ ಪ್ರಮಾಣದಲ್ಲಿ ಆಗುಮಿಸುತ್ತಿದ್ದಾರೆ.

ಆದರೆ ಬಿ ಖಾತಾ ಪಡೆದುಕೊಳ್ಳಲು ಬರುವಂತಹ ಸಾರ್ವಜನಿಕರಿಗೆ ನಗರಸಭೆಯ ಸಿಬ್ಬಂದಿಗಳಾದ ಅಣ್ಣಪ್ಪ, ಪರಸಪ್ಪ,  ಮತ್ತು ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಯವರು ಕಚೇರಿಗೆ ಅಲೆದಾಡಿಸುತ್ತಿದ್ದು, ಸಾರ್ವಜನಿಕರು ಇದರಿಂದಾಗಿ ರೋಸಿ ಹೋಗಿ ನಮ್ಮ ಬಳಿ ಬಂದು ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ಮುಂದಾಗಿದ್ದರಿಂದ, ನಾವು ನಗರಸಭೆಗೆ ಆಗಮಿಸುವಂತೆ ಆಗಿದೆ.

ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರು ನೀಡಿರುವ ನೂರಾರು ಅರ್ಜಿಗಳನ್ನು ವಿಲೇವಾರಿ ಮಾಡದೇ ದಾಖಲೆಗಳಲ್ಲಿ ವ್ಯತ್ಯಾಸಗಳು ಇದಾವೆ, ಅವುಗ ಳನ್ನು ತಗೊಂಡು ಬನ್ನಿ ಎನ್ನುತ್ತಾ ನೂರಾರು ಅರ್ಜಿಗಳನ್ನು ತಮ್ಮ ಬಳಿ ಇಟ್ಕೊಂಡು ಸಾರ್ವ ಜನಿಕರನ್ನು ಕಚೇರಿಗೆ ಅಲೆದಾಡಿಸುವುದಕ್ಕೆ ಮುಂದಾಗಿದ್ದಾರೆ. ಆದ್ದರಿಂದ ಬರುವ ಮಂಗಳವಾರದೊಳಗೆ ಎಲ್ಲವನ್ನೂ ವಿಲೇವಾರಿ ಮಾಡಬೇಕು, ಒಂದು ವೇಳೆ ವಿಳಂಬ ನೀತಿ ಅನುಸರಿಸಲು ಮುಂದಾದಾರೆ, ನಂತರ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಮ್ಯಾನೇಜರ್ ನಿರಂಜನಿ ಮತ್ತು ಇತರರು ಹಾಜರಿದ್ದರು.

error: Content is protected !!