ಬಕ್ಕೇಶ್ವರ ಸ್ವಾಮಿ ನಿಶಾನಿ ಪಡೆದ ದೇವರಮನಿ ಶಿವಕುಮಾರ್‌

ಬಕ್ಕೇಶ್ವರ ಸ್ವಾಮಿ ನಿಶಾನಿ ಪಡೆದ ದೇವರಮನಿ ಶಿವಕುಮಾರ್‌

ದಾವಣಗೆರೆ, ಏ. 3 – ನಗರದ ಚೌಕಿ ಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ಮಹಾರಥೋತ್ಸವದಲ್ಲಿ ನಡೆದ ರಥೋ ತ್ಸವದ ಧ್ವಜ (ನಿಶಾನಿ) ಹರಾಜಿನಲ್ಲಿ ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್ ಅವರು 1 ಲಕ್ಷದ 51 ಸಾವಿರದ 51 ರೂ.ಗಳಿಗೆ ನಿಶಾನಿ ಪಡೆದರು.

ಈ ಸಂದರ್ಭದಲ್ಲಿ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಅಥಣಿ ವೀರಣ್ಣ, ಸದಸ್ಯರಾದ ಮಾಗಾನಹಳ್ಳಿ ಯುವರಾಜ್‌, ಮಾಗಾನಹಳ್ಳಿ ವಿನಯ್‌, ವೀರಶೈವ ಸಮಾಜದ ಮುಖಂಡರಾದ ಜಯದೇವ ಎಸ್. ದೇವರಮನಿ, ಜಯಪ್ರಕಾಶ್‌ ಮಾಗಿ,  ಶ್ರೀಮತಿ ಅನಿತಾ ಶಿವಕುಮಾರ್‌, ಮತ್ತಿತರರು ಉಪಸ್ಥಿತರಿದ್ದರು.

error: Content is protected !!