ಮಲೇಬೆನ್ನೂರು ಬಳಿ 11 ಅಕ್ರಮ ಪಂಪ್‌ಸೆಟ್ ತೆರವು

ಮಲೇಬೆನ್ನೂರು ಬಳಿ 11 ಅಕ್ರಮ ಪಂಪ್‌ಸೆಟ್ ತೆರವು

ಮಲೇಬೆನ್ನೂರು, ಮಾ.23- ಭದ್ರಾ ನಾಲೆಗೆ ಅಕ್ರಮವಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ಜಿಲ್ಲಾಧಿಕಾರಿಗಳು ರಚಿಸಿರುವ ಟಾಸ್ಕ್‌ಫೋರ್ಸ್‌ನವರು ಶನಿವಾರ ತೆರವು ಮಾಡಿಸಿದರು.

ಭದ್ರಾ ನಾಲಾ ನಂ.3 ಉಪವಿಭಾಗ ವ್ಯಾಪ್ತಿಯ ಕೊಪ್ಪದಿಂದ ಯಲವಟ್ಟಿಯವರೆಗೆ ಕಾರ್ಯಾಚರಣೆ ನಡೆಸಿ, ಒಟ್ಟು 11 ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ, 6 ಯಂತ್ರಗಳನ್ನು ವಶಪಡಿಸಿಕೊಂಡರು.

4ನೇ ಶನಿವಾರ ರಜೆ ಇದ್ದರೂ ಉಪತಹಶೀಲ್ದಾರ್ ಆರ್.ರವಿ, ಎಇಇ ಕೃಷ್ಣಮೂರ್ತಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮಲೆಕ್ಕಾಧಿಕಾರಿ ಅಣ್ಣಪ್ಪ, ಗ್ರಾಮ ಸಹಾ ಯಕರಾದ ಮಾರುತಿ, ಕೃಷ್ಣಮೂರ್ತಿ, ಪೊಲೀಸರಾದ ವೆಂಕಟರಮಣ, ಸೋಮಸುಂದರ್, ಮಹೇಶ್ವರ ಮತ್ತಿತರರು ಕಾರ್ಯಾಚರಣೆಯಲ್ಲಿ ಇದ್ದರು.

ಬೆಸ್ಕಾಂನ ಹರೀಶ್ ಅವರು, ವಿದ್ಯುತ್ ಮಾರ್ಗ ಹಾಗೂ ಸೌಡಿಗಳು ಪೈಪ್‌ಗಳನ್ನು ತೆರವು ಮಾಡಿದರು.

ತೆರವಿಗೆ ಆಗ್ರಹ : ಚನ್ನಗಿರಿ ತಾಲ್ಲೂಕಿನಲ್ಲಿ ಭದ್ರಾ ಮುಖ್ಯ ನಾಲೆಗೆ ಸಾವಿರಾರು ಅಕ್ರಮ ಪಂಪ್‌ಸೆಟ್‌ಗಳನ್ನು ಹಾಕಿಕೊಂಡು ರಾಜಾರೋಷವಾಗಿ ನೀರನ್ನು ಎತ್ತುತ್ತಿದ್ದಾರೆ. ಮೊದಲು ಅವುಗಳನ್ನು ತೆರವು ಮಾಡಿಸಿ ಎಂದು ರೈತ ಸಂಘದ ಸಿರಿಗೆರೆ ಪಾಲಾಕ್ಷಪ್ಪ ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

error: Content is protected !!