ಹರಿಹರ, ಮಾ. 18- ನಗರದ ಊರಮ್ಮ ದೇವಿ ಜಾತ್ರಾ ಮಹೋತ್ಸವವು ಭಕ್ತಿಭಾವದೊಂದಿಗೆ ಆರಂಭಗೊಂಡಿತು. ಜಾತ್ರೆಯ ಮೊದಲ ದಿನ ದಂದು, 66 ಹಳ್ಳಿಗಳ ಅಧಿದೇವತೆಯಾದ ಊರಮ್ಮ ದೇವಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.
ಬೆಳಗಿನ ಜಾವ 4 ಗಂಟೆಗೆ, ದೇವಸ್ಥಾನದಲ್ಲಿ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಆಯೋಜಿಸಲಾ ಗಿತ್ತು. ನಿನ್ನೆ ರಾತ್ರಿಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು, ದೇವರ ದರ್ಶನ ಪಡೆದು, ಉಡಿ ಸಮರ್ಪಿಸಿದರು. ಮಧ್ಯಾಹ್ನ 2 ಗಂಟೆಗೆ, ಮಾಜೇನಹಳ್ಳಿ ಮತ್ತು ಕಸಬಾ ಭಾಗಗಳಿಂದ ಬೆಲ್ಲದ ಬಂಡಿಗಳಲ್ಲಿ ಜೋಳವನ್ನು ಮೆರವಣಿಗೆಯ ಮೂಲಕ ತರಲಾಯಿತು.
ಸಂಜೆ 5 ಗಂಟೆಗೆ, ಚರಗದ ಜೋಳವನ್ನು ರಾಶಿ ಹಾಕಿ, ಭಕ್ತರು “ಉಧೋ ಉಧೋ ಊರಮ್ಮ ದೇವಿ” ಎಂದು ಜಯಘೋಷ ಮೊಳಗಿಸಿದರು. ರಾತ್ರಿಯಿಡೀ ಯುವಕರು ಡಿಜೆ ಸಂಗೀತಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು.
ರಾತ್ರಿ 11 ಗಂಟೆಗೆ, ದೇವಸ್ಥಾನದಲ್ಲಿ ಮಹಾ ಮಂಗಳಾರತಿ ನೆರವೇರಿಸಿ, ದೇವಿಯನ್ನು ಅದ್ದೂರಿ ಮೆರವಣಿಗೆಯ ಮೂಲಕ ಜಾತ್ರಾ ಮಂಟಪಕ್ಕೆ ಕರೆತರಲಾಯಿತು. ಬುಧವಾರ ಬೆಳಿಗ್ಗೆ, ಹರಿಜನ ಕೇರಿಯಿಂದ ಘಟ್ಟಿಗಡಿಗೆ ಮತ್ತು ಹಿಟ್ಟಿನ ಕೋಣ ವನ್ನು ಮೆರವಣಿಗೆಯಲ್ಲಿ ತಂದು, ಚೌಕಿ ಮನೆಯಲ್ಲಿ ಕೋಣನ ಬಲಿ ನೀಡಲಾಯಿತು. ನಂತರ, ನಗರದ ಹೊರವಲಯದಲ್ಲಿ ಚರಗ ಚೆಲ್ಲುವ ಕಾರ್ಯಕ್ರಮ ನಡೆಯಿತು. ಈ ವೇಳೆ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಎಸ್ ರಾಮಪ್ಪ, ಮಾಜಿ ಜಿಪಂ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ಇನ್‌ಸೈಟ್ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್, ಕಸಬಾ ಗೌಡ್ರು, ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ, ಯುವ ಉದ್ಯಮಿ ಡಿ.ಯು. ಅರುಣ್ ಕುಮಾರ್ ಮಿಠಾಯಿ, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಎ. ವಾಮನಮೂರ್ತಿ, ಕೆ. ಜಿ. ಸಿದ್ದೇಶ್, ಎಸ್.ಎಂ.ವಸಂತ್, ದಿನೇಶ್ ಬಾಬು, ಪಿ.ಎನ್. ವೀರುಪಾಕ್ಷಪ್ಪ, ಹನುಮಂತಪ್ಪ, ರಜನಿಕಾಂತ್, ನಾಮನಿರ್ದೇಶನ ಸದಸ್ಯರಾದ ಕೆ.ಬಿ. ರಾಜಶೇಖರ್, ಸಂತೋಷ ದೊಡ್ಡಮನಿ, ಮಾಜಿ ನಗರಸಭೆ ಸದಸ್ಯ ಡಿ.ಹೇಮಂತರಾಜ್, ಗೌಡ್ರು ಪುಟ್ಟಪ್ಪ, ವೆಂಕಟೇಶ್ ತೇಲ್ಕರ್, ಕುರುಬ ಸಮಾಜದ ಮಾಜಿ ಅಧ್ಯಕ್ಷ ಕೆ.ಜಡಿಯಪ್ಪ, ಅಣ್ಣಪ್ಪ ಪೈ, ಸುರೇಶ್ ಚಂದಪೂರ್, ಕಾಳೇರ್ ಮಂಜುನಾಥ್, ಸಿ.ಎನ್. ಹುಲಗೇಶ್, ಚೂರಿ ಜಗದೀಶ್, ಅಡಿಕಿ ಕುಮಾರ್, ಅಮರಾವತಿ ನಾಗರಾಜ್, ಹಲಸಬಾಳು ಶಿವಾನಂದಪ್ಪ, ವೈ.ಎನ್. ಮಹೇಶ್, ಎಂ. ಚಿದಾನಂದ ಕಂಚಿಕೇರಿ, ಎಂ.ಹೆಚ್. ಚಂದ್ರಪ್ಪ, ರೇವಣಪ್ಪ, ಮಿಠಾಯಿ ಸಿದ್ದೇಶ್, ಎಸ್.ಹೆಚ್. ಪ್ಯಾಟಿ, ಹೆಚ್.ನಿಜಗುಣ, ಬಸವರಾಜ್, ಶೇರಾಪುರ ರಾಜಪ್ಪ, ದುರಗೋಜಿ ಮೋಹನ್, ಮುದೇಗೌಡ್ರು ಪ್ರಭು, ಕರಿಬಸಪ್ಪ ಕಂಚಿಕೇರಿ, ಬೆಣ್ಣೆ ರೇವಣಸಿದ್ದಪ್ಪ, ಪೂಜಾರ್ ರಾಜು, ಪಕ್ಕಿರಪ್ಪ, ಚಂದನ್ ಮೂರ್ಕಲ್, ಆನಂದ್ ಮೂರ್ಕಲ್, ಅಜಿತ್ ಸಾವಂತ್, ತುಳಜಪ್ಪ ಭೂತೆ, ವಿನಾಯಕ ಆರಾಧ್ಯಮಠ, ಐರಣಿ ಅಣ್ಣಪ್ಪ, ಶ್ರೀನಿವಾಸ್ ಚಂದಪೂರ್, ಬಾವಿಕಟ್ಟಿ ಕರಿಬಸಪ್ಪ, ಬೆಳಕೇರಿ ಚಂದ್ರಪ್ಪ, ಪೋಟೋ ಮಧು, ಪರಮೇಶ್ವರಪ್ಪ, ಬಸವರಾಜಪ್ಪ ಹರಪನಹಳ್ಳಿ, ಸಂತೋಷ, ಪಾಲಕ್ಷಪ್ಪ, ಅಣ್ಣಪ್ಪ ಶಾವಿಗೆ, ಹಾವನೂರು ಈರಣ್ಣ, ಮಕ್ರಿ ಪಾಲಾಕ್ಷಪ್ಪ, ರಾಜು ಆಟೋ, ಅಜ್ಜಪ್ಪ, ಅರ್ಚಕರಾದ ಈರಣ್ಣ, ನಾಗರಾಜ್, ಗಜೇಂದ್ರ, ಪುನೀತ್, ಜನಾರ್ದನ, ಇತರರು ಹಾಜರಿದ್ದರು.