`ಅಪರಾಧ ಪ್ರಕರಣ ಕಡಿಮೆ ಆಗಿವೆ’ ಹರೀಶ್ ಪ್ರಶ್ನೆಗೆ ಗೃಹ ಸಚಿವರ ಉತ್ತರ

`ಅಪರಾಧ ಪ್ರಕರಣ ಕಡಿಮೆ ಆಗಿವೆ’  ಹರೀಶ್ ಪ್ರಶ್ನೆಗೆ ಗೃಹ ಸಚಿವರ ಉತ್ತರ

ಬೆಂಗಳೂರು,ಮಾ.4- ಸೈಬರ್ ಕ್ರೈಂ ಘಟನೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಸಭೆಗಿಂದು ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗಾಂಜಾ, ಅಫೀಮು, ಮಟ್ಕಾ ದಂಧೆ, ಕಳ್ಳಭಟ್ಟಿ, ಸರಗಳ್ಳತನ, ವಾಹನ ಕಳವು ಹಾಗೂ ಮಾದಕ ವಸ್ತುಗಳ ಮಾರಾಟದ ಮೇಲೆ ನಿರಂತರ ನಿಗಾ ವಹಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.  ರಾತ್ರಿ ಪಾಳಿ ಗಸ್ತು ಹೆಚ್ಚಿಸಲಾಗಿದೆ, ಹರಿಹರದಲ್ಲಿ 2023 ರಿಂದ ಫೆಬ್ರವರಿ 24 ರವರೆಗೆ 123 ಪ್ರಕರಣಗಳು ದಾಖಲಾಗಿವೆ ಎಂದರು. 

error: Content is protected !!