ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಟಬಿಬಿಯಾ ಹೂಗಳ ಕಾರುಬಾರು ಹೆಚ್ಚಾಗುತ್ತಿದೆ. ಅಮೆರಿಕದ ಟ್ರೀ ಆಫ್ ಗೋಲ್ಡ್ ಎಂದು ಪ್ರಖ್ಯಾತ ಪಡೆದಿರುವ ಟಬಿಬಿಯಾ ಹೂವು ಈಗ ದಾವಣಗೆರೆಯ ಕೆಲವು ರಸ್ತೆಗಳಲ್ಲಿ ಬೇಸಿಗೆ ಸಮಯದಲ್ಲೂ ಹಳದಿ ಹಾಗೂ ಕೆಂಪು ಬಣ್ಣದ ಹೂಗಳು ಕೂಲ್ ಆಗಿ ಅರಳಿ ನಗುತ್ತಾ ಜನರ ಗಮನ ಸೆಳೆಯುತ್ತಿವೆ. ಮಳೆಗಾಲದ ತುಂತುರುವಿನಲ್ಲಿ ಮಿಂದೆದ್ದ ಈ ಹೂವಿನ ಮರಗಳು, ಇಬ್ಬನಿಗೆ ಮೈಯೊಡ್ಡಿದ ನಂತರ ಇದೀಗ ಬೇಸಿಗೆಗೆ ಮೊಗ್ಗರಳಿಸಿವೆ. ನಗರದ ಹದಡಿ ರಸ್ತೆಯಲ್ಲಿನ ಚಿತ್ರಣವಿದು.
ನೋಡಬನ್ನಿ ಟಬಿಬಿಯಾ ಹೂಗಳನ್ನು…
