ಎಸ್ಪಿ ಉಮಾ ಪ್ರಶಾಂತ್
ದಾವಣಗೆರೆ, ಫೆ. 23 – ಲಕ್ಷಾಂತರ ಹಣ ಖರ್ಚು ಮಾಡಿ ಈ ಬಡಾವಣೆ ಯಲ್ಲಿ ಮನೆಗಳನ್ನು ಕಟ್ಟಿಸಿದ್ದೀರಿ. ಆದರೆ ತಮ್ಮ ಮನೆಗಳ ರಕ್ಷಣೆಗೆ ಮಹತ್ವ ಕೊಡುತ್ತಿಲ್ಲ. ಇದರಿಂದ ಕಳ್ಳಕಾಕರಿಗೆ ಅನುಕೂಲವಾಗುತ್ತಿದೆ. ಸ್ನೇಹಮಯಿ ಪೋಲಿಸ್ ಇಲಾಖೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಪೊಲೀಸ್ ಇಲಾಖೆ ಯೊಂದಿಗೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಶ್ರೀಮತಿ ಉಮಾ ಪ್ರಶಾಂತ್ ಹೇಳಿದರು.
ನಗರದ ಎಸ್.ಎಸ್. ಬಡಾವಣೆಯ ಎ ಬ್ಲಾಕ್ನಲ್ಲಿ ಎಸ್.ಎಸ್.ಬಡಾವಣೆ ಸ್ನೇಹಿತರ ಬಳಗದ ಸಂಘವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕ ರಣಗಳು ಹೆಚ್ಚಾಗುತ್ತಿದ್ದು ಆದ್ದರಿಂದ ತಮ್ಮ ಮನೆಗಳಿಗೆ ಸಿಸಿ ಟಿವಿಗಳನ್ನು ಅಳವಡಿಸಿ ಕೊಂಡಲ್ಲಿ ನಮ್ಮ ಇಲಾಖೆಗೆ ಸಹಕಾರಿಯಾಗು ತ್ತದೆ. ನಮ್ಮ ಬಗ್ಗೆ ನಾವೂ ಸಹಾ ಎಚ್ಚರ ವಹಿಸುವುದು ಅವಶ್ಯಕವಾಗಿರುತ್ತದೆ ಎಂದರು.
ತಹಶೀಲ್ದಾರ್ ಡಾ.ಎಂ.ಬಿ.ಅಶ್ವತ್ ಮಾತ ನಾಡಿ, ದಾವಣಗೆರೆಯ ವಿವಿಧ ಬಡಾವಣೆ ಸೇರಿದಂತೆ ವಿದ್ಯಾನಗರ ಪೋಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಹೆಚ್ಚಿನ ಕಳ್ಳತನ, ಸುಲಿಗೆ ಹೆಚ್ಚಾಗಿದ್ದು, ಪೋಲೀಸ್ ಇಲಾಖೆಯ ಸೂಚನೆಗಳನ್ನು ಪ್ರತಿ ಯೊಬ್ಬರೂ ಸಹಾ ಪಾಲಿಸಲು ಕರೆ ನೀಡಿದರು.
ಸಂಘದ ಅಧ್ಯಕ್ಷ ಎಂ.ಆಂಜನೇಯುಲು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸಂಘದ ಕಾರ್ಯದರ್ಶಿ ಎಂ.ಎಸ್.ದೇವರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ನಾಗರಿಕರಿಗೆ ಸ್ವಚ್ಛತೆ, ಪರಿಸರ ರಕ್ಷಣೆ, ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಸ್ಥಳೀಯರ ಸಹಕಾರದಿಂದ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಧಕರಾದ ಪರಿಸರ ಪ್ರೇಮಿ ಪ್ರಸೂತಿ, ಸ್ತ್ರೀರೋಗ ತಜ್ಞರಾದ ಡಾ.ಶಾಂತಾಭಟ್, ಜಿಲ್ಲಾ ಕ್ಯಾನ್ಸರ್ ಅಭಿಯಾನದ ರಾಯಭಾರಿ ಆರ್.ಟಿ.ಅರುಣಕುಮಾರ್ ಅವ ರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮ ದಲ್ಲಿ ಸಂಘದ ಶಿವನಳ್ಳಿ ರಮೇಶ್, ಸಂಘಟನಾ ಕಾರ್ಯದರ್ಶಿ ಟಿ.ನಾಗ ರಾಜ ಸೇರಿದಂತೆ ಇತರರು ಭಾಗವಹಿಸಿದ್ದರು. ನಂತರದಲ್ಲಿ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್, ನರಸಿಂಹ ಜೋಶಿ, ಬಸವರಾಜ್ ಮಾಮನಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.