ದಾವಣಗೆರೆ, ಫೆ. 21 – ಮಹಾನಗರ ಪಾಲಿಕೆ 6ನೇ ವಾರ್ಡಿನಲ್ಲಿ ನಗರ ಪಾಲಿಕೆಯಿಂದ ಸ್ಥಾಪಿಸಿರುವ ವಾಚನಾಲಯವನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಿದರು. 6ನೇ ವಾರ್ಡ್ ಪಾಲಿಕೆ ಸದಸ್ಯ ಎಲ್.ಡಿ ಗೋಣೆಪ್ಪ, ಮಹಾಪೌರರಾದ ಕೆ. ಚಮನ್‌ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಆಶಾ ಉಮಾಶಂಕರ್, ಸವಿತಾ ಹುಲ್ಲುಮನೆ, ಸುಧಾ ಇಟ್ಟಿಗುಡಿ, ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಮಾಜಿ ಮೇಯರ್ ಗೋಣೆಪ್ಪ, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ, ಮುಖಂಡ ಜೆ.ಡಿ. ಪ್ರಕಾಶ್, ದೂಡಾ ಮಾಜಿ ಅಧ್ಯಕ್ಷ ಮಹಾಂತೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಗೌಡ್ರ ಗಿರೀಶ್, ಜೆಡಿಎಸ್ ಜಯ್ಯಪ್ಪ, ನೀಲಪ್ಪ, ಟಿ. ರಮೇಶ್, ಜಮ್ಮನಹಳ್ಳಿ, ನಾಗರಾಜ್, ಎಲ್.ಜಿ. ಬಸವರಾಜ್ ಇನ್ನಿತರರಿದ್ದರು.
6ನೇ ವಾರ್ಡ್‌ನಲ್ಲಿ ಎಸ್ಸೆಸ್ಸೆಂರಿಂದ ವಾಚನಾಲಯದ ಉದ್ಘಾಟನೆ
