ಅಟಲ್‌ಜಿ ಜನ್ಮ ಶತಮಾನೋತ್ಸವ ವರ್ಷಾಚರಣೆ
ದಾವಣಗೆರೆ, ಫೆ. 19- ಜಿಲ್ಲಾ ಬಿಜೆಪಿ ಮತ್ತು ಅಟಲ್ ಜೀ ಶತಮಾನೋತ್ಸವ ಸಮಿತಿ ವತಿಯಿಂದ ಅಟಲ್‌ಜಿ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಜಿಲ್ಲೆಯ ಬಿಜೆಪಿಯ ಹಿರಿಯ ನಾಯಕರ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಭಾರತೀಯ ಜನಸಂಘ ಹಾಗೂ ಬಿಜೆಪಿಯ ಅಖಂಡ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರನ್ನು ಗೌರವಿಸಲಾಯಿತು.
ಪಕ್ಷದ ಹಿರಿಯ ನಾಯಕರಾಗಿರುವ ಕೆ.ಬಿ. ಶಂಕರನಾರಾಯಣ ಹಾಗೂ ಜೆ. ಸೋಮನಾಥ್ ಅವರುಗಳ ಮನೆಗಳಿಗೆ ತೆರಳಿ ಗೌರವ ಸಮರ್ಪಣೆ ಮಾಡಲಾಯಿತು.
ಅಟಲ್ ಜಿ ಶತಮಾನೋತ್ಸವ ವರ್ಷಾಚರಣೆಯ ರಾಜ್ಯ ಪ್ರಮುಖರಾದ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಜಿಲ್ಲಾ ಬಿಜೆಪಿಯ ಅಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್ ಹಾಗೂ ಅಟಲ್ ಜಿ ಶತಮಾನೋತ್ಸವ ಜಿಲ್ಲಾ ಸಮಿತಿಯ ಎಲ್.ಎನ್ ಕಲ್ಲೇಶ್, ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ್, ಜಿಲ್ಲಾ ಬಿಜೆಪಿಯ ಮಾಧ್ಯಮ ಪ್ರಮುಖರಾದ ಎಚ್.ಪಿ. ವಿಶ್ವಾಸ್, ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಮುಖ ಕೊಟ್ರೇಶ ಗೌಡ, ಮಾಜಿ ಮಹಾಪೌರರಾದ ಎಂ.ಎಸ್. ವಿಠ್ಠಲ್ ಹಾಗೂ ಇತರರು ಇದ್ದರು. ಈ ಸಂದರ್ಭದಲ್ಲಿ ರವೀಂದ್ರನಾಥ್ ಅವರು ಅಟಲ್ ಜೀಯವರ ಒಡನಾಟದ ನೆನಪು ಮಾಡಿಕೊಂಡರು.